×
Ad

ಮೇ 26ರಂದು ಮಂಗಳೂರಿಗೆ ಸಯ್ಯಿದ್ ಹಬೀಬ್ ಅಲ್ ಜಿಫ್ರಿ ಮದೀನಾ ಭೇಟಿ

Update: 2023-05-22 23:51 IST

ಮಂಗಳೂರು : ಮದೀನಾದ ಮಹಾನ್ ವಿದ್ವಾಂಸರೂ, ವಿಶ್ವ ಪ್ರಸಿದ್ಧ ಆಧ್ಯಾತ್ಮಿಕ ನಾಯಕರೂ ಆದ ಸಯ್ಯಿದ್ ಹಬೀಬ್ ಆದಿಲ್ ಅಲ್ ಜಿಫ್ರಿ ಅವರು ಮೇ 26ರಂದು ಮಂಗಳೂರಿಗೆ ಆಗಮಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

ಅಂದು ಅಪರಾಹ್ನ 3 ಗಂಟೆಗೆ ಮಂಗಳೂರಿನ ಪುರಭವನದಲ್ಲಿ ನಡೆಯಲಿರುವ ಹಾವೇರಿ ಮುಈನುಸುನ್ನಾ ವಿದ್ಯಾಸಂಸ್ಥೆಯ ದಶಮ ಸಂಭ್ರಮ ಉದ್ಘಾಟನಾ ಸಮಾರಂಭದಲ್ಲಿ ಅವರು ಭಾಗವಹಿಸಲಿದ್ದಾರೆ ಎಂದು ಹಾವೇರಿ ಸಂಸ್ಥೆಯ ನಿರ್ದೇಶಕ  ಕೆ.ಎಂ.ಮುಸ್ತಫಾ ನ‌ಈಮಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಸೌದಿ ಅರೇಬಿಯಾದ ಮದೀನಾ ನಿವಾಸಿಯಾಗಿರುವ ಅಲ್ ಜಿಫ್ರಿಯವರು ಪ್ರವಾದಿ (ಸ)ಯವರ ಕುಟುಂಬ ಪರಂಪರೆಗೆ ಸೇರಿದ್ದು, ವಿಶ್ವಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಹಾವೇರಿ ಕೇಂದ್ರಿತ ಮುಈನುಸುನ್ನಾ ವಿದ್ಯಾಸಂಸ್ಥೆಯ ದಶಮ ಸಂಭ್ರಮವನ್ನು ಅವರು ಆಶೀರ್ವದಿಸಲಿದ್ದು, ಸಯ್ಯಿದ್ ಆಟಕ್ಕೋಯ ತಂಙಳ್ ಕುಂಬೋಳ್, ಡಾ. ಯೆನೆಪೋಯ ಅಬ್ದುಲ್ಲಾ ಕುಂಞಿ ಹಾಜಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಕೆ.ಎಂ.ಮುಸ್ತಫಾ ನ‌ಈಮಿ ತಿಳಿಸಿದ್ದಾರೆ. 

Similar News