×
Ad

ನಾಗ್ಪುರ-ಪುಣೆ ಹೆದ್ದಾರಿಯಲ್ಲಿ ಟ್ರಕ್‌ಗೆ ಬಸ್ ಢಿಕ್ಕಿ, 7 ಮಂದಿ ಮೃತ್ಯು

Update: 2023-05-23 10:10 IST

ಮುಂಬೈ: ನಾಗ್ಪುರ-ಪುಣೆ ಹೆದ್ದಾರಿಯಲ್ಲಿ ಇಂದು ಬೆಳಗ್ಗೆ ಬಸ್ಸೊಂದು ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಏಳು ಮಂದಿ ಸಾವನ್ನಪ್ಪಿದ್ದು, 13 ಮಂದಿ ಗಾಯಗೊಂಡಿದ್ದಾರೆ.

ಮಹಾರಾಷ್ಟ್ರ ಬುಲ್ಧಾನ ಜಿಲ್ಲೆಯಲ್ಲಿ ಈ ದುರಂತ ಸಂಭವಿಸಿದೆ. ಪುಣೆಯಿಂದ ಬುಲ್ಧಾನಾದಲ್ಲಿರುವ ಮೆಹೆರ್‌ಗೆ ತೆರಳುತ್ತಿದ್ದ ಬಸ್ ವಿರುದ್ಧ ದಿಕ್ಕಿನಿಂದ ವೇಗವಾಗಿ ಬಂದ ಟ್ರಕ್‌ಗೆ ಡಿಕ್ಕಿ ಹೊಡೆದಿದೆ.

ಗಾಯಾಳುಗಳನ್ನು ಸಮೀಪದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಢಿಕ್ಕಿಯಿಂದ ಎರಡೂ  ವಾಹನಗಳು ನಜ್ಜುಗುಜ್ಜಾಗಿದ್ದು, ಇದು ಅಪಘಾತದ ಸಮಯದಲ್ಲಿ ವಾಹನಗಳು  ಎಷ್ಟು ವೇಗವಾಗಿ ಪ್ರಯಾಣಿಸುತ್ತಿದ್ದವು ಎಂಬುದನ್ನು ತೋರಿಸುತ್ತದೆ. ಟ್ರಕ್, ಲಾಜಿಸ್ಟಿಕ್ಸ್ ಸಂಸ್ಥೆಯೊಂದಕ್ಕೆ ಸೇರಿದ್ದು ಎಂದು ತಿಳಿದುಬಂದಿದೆ.

ಸ್ಥಳೀಯ ನಿವಾಸಿಗಳು ರಕ್ಷಣಾ ಕಾರ್ಯದಲ್ಲಿ ಸಹಾಯ ಮಾಡುತ್ತಿರುವುದು ಕಂಡುಬಂದಿದ್ದು,  ವಾಹನಗಳ ಜಖಂಗೊಂಡ ಅವಶೇಷಗಳ ಅಡಿಯಿಂದ ಬದುಕುಳಿದವರನ್ನು ಹೊರ ತೆಗೆಯುವ  ಪ್ರಯತ್ನ ನಡೆಯುತ್ತಿದೆ.

ಬಸ್ಸಿನ ಸೀಟುಗಳು ಪುಡಿಪುಡಿಯಾಗಿದ್ದು, ವಿಂಡ್ ಶೀಲ್ಡ್ ಹಾಗೂ  ಕಿಟಕಿ ಗಾಜುಗಳನ್ನು ಒಡೆದು ಬದುಕುಳಿದವರನ್ನು ಹೊರ ತೆಗೆಯಲಾಗಿದೆ ಎಂದು ತಿಳಿದುಬಂದಿದೆ.

Similar News