×
Ad

ಕೆಮ್ಮಿನ ಸಿರಪ್ ರಫ್ತಿಗೆ ಜೂನ್ 1 ರಿಂದ ಸರಕಾರದ ಹೊಸ ನಿಯಮ

Update: 2023-05-23 12:53 IST

ಹೊಸದಿಲ್ಲಿ:  ಕೆಮ್ಮು ಸಿರಪ್ ರಫ್ತುದಾರರು ಜೂನ್ 1 ರಿಂದ ಹೊರಹೋಗುವ ಸಾಗಣೆಗೆ ಅನುಮತಿ ಪಡೆಯುವ ಮೊದಲು ನಿರ್ದಿಷ್ಟ ಸರಕಾರಿ ಪ್ರಯೋಗಾಲಯಗಳಲ್ಲಿ ತಮ್ಮ ಉತ್ಪನ್ನಗಳ ಪರೀಕ್ಷೆಯನ್ನು ಕೈಗೊಳ್ಳಬೇಕಾಗುತ್ತದೆ.

ಭಾರತೀಯ ಸಂಸ್ಥೆಗಳು ರಫ್ತು ಮಾಡುವ ಕೆಮ್ಮು ಸಿರಪ್‌ಗಳಿಗೆ ಜಾಗತಿಕವಾಗಿ ಗುಣಮಟ್ಟದ ಕುರಿತು ಕಳವಳ  ವ್ಯಕ್ತವಾದ ನಂತರ ಈ ನಿರ್ದೇಶನ ನೀಡಲಾಗಿದೆ.

" ಜೂನ್ 1, 2023 ರಿಂದ ಜಾರಿಗೆ ಬರುವಂತೆ ಪರೀಕ್ಷೆಗೆ ಒಳಪಟ್ಟಿರುವ ರಫ್ತು ಮಾದರಿಗಳು ಹಾಗೂ  ಯಾವುದೇ ಪ್ರಯೋಗಾಲಯಗಳು ನೀಡುವ ವಿಶ್ಲೇಷಣೆಯ ಪ್ರಮಾಣಪತ್ರವನ್ನು ನೀಡಿದರೆ ಮಾತ್ರ  ಕೆಮ್ಮು ಸಿರಪ್ ರಫ್ತು ಮಾಡುವುದನ್ನು ಅನುಮತಿಸಲಾಗುವುದು," ಎಂದು  ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯ (ಡಿಜಿಎಫ್‌ಟಿ) ಸೋಮವಾರ ಅಧಿಸೂಚನೆಯಲ್ಲಿ ತಿಳಿಸಿದೆ.

Similar News