ಮಲ್ಪೆ: ಎಸೆಸೆಲ್ಸಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

Update: 2023-05-23 16:11 GMT

ಮಲ್ಪೆ, ಮೇ 23: ಎಸ್‌ಐಓ ಮಲ್ಪೆವತಿಯಿಂದ ಎಸೆಸೆಲ್ಸಿ ಸಾಧಕ ವಿದ್ಯಾರ್ಥಿಗಳನ್ನು ಅಭಿನಂಧನಾ ಕಾರ್ಯಕ್ರಮ ವನ್ನು ಮಂಗಳವಾರ ಮಲ್ಪೆಯ ಫ್ಲವರ್ಸ್‌ ಆಫ್ ಪ್ಯಾರಡೈಸ್ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.

2022-23ನೇ ಸಾಲಿನಲ್ಲಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಮಲ್ಪೆಯ ಫ್ಲವರ್ಸ್‌ ಆಫ್ ಪ್ಯಾರಡೈಸ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಮತ್ತು ಮಲ್ಪೆಯ ಆಸುಪಾಸಿನ 5 ಶಾಲೆಗಳ ಸುಮಾರು 16 ವಿದ್ಯಾರ್ಥಿಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಮುಖ್ಯ ಅತಿಥಿಯಾಗಿ ಕೆಮ್ಮಣ್ಣು ಗ್ರಾಪಂ ಸದಸ್ಯ ಇದ್ರೀಸ್ ಹೂಡೆ ಮಾತನಾಡಿ, ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಸನ್ನದಧರಾಗಬೇಕು ಹಾಗೂ ಮಕ್ಕಳನ್ನು ಸಮಾಜಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ರೂಪಿಸುವಲ್ಲಿ ನಾವೆಲ್ಲರೂ ಕಾರಣಕರ್ತರಾಗಬೇಕು ಎಂದು ಹೇಳಿದರು.

ಫ್ಲವರ್ಸ್‌ ಆಫ್ ಪ್ಯಾರಡೈಸ್ ಶಾಲೆಯ ವಿಜ್ಞಾನ ವಿಭಾಗದ ಶಿಕ್ಷಕ ಶಶಿರಾಜ್ ಆಚಾರ್ಯ, ಮಲ್ಪೆ ಜಾಮಿಯಾ ಮಸೀದಿಯ ಧರ್ಮಗುರು ಇಮ್ರಾನುಲ್ಲಾ ಖಾನ್ ಮನ್ಸೂರಿ ಮಾತನಾಡಿದರು.

ಎಸ್.ಐ.ಓ. ಉಡುಪಿ ಜಿಲ್ಲಾ ಹೊಣೆಗಾರ ಶೇಖ್ ಅಯಾನ್ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಐ.ಸಿ.ಸಿ.ಯ ಜಿಲ್ಲಾ ಕಾರ್ಯದರ್ಶಿ ಫರ್ಹಾನ್ ಉದ್ಯಾವರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಜಿ.ಐ.ಓ. ಮಲ್ಪೆ ನಿಕಟ ಪೂರ್ವ ಅಧ್ಯಕ್ಷೆ ರಿಜಾ ಅಸಾದಿ ವಂದಿಸಿದರು.

Similar News