×
Ad

ಮಂಜನಾಡಿ: ನಾಳೆ ಶರಫುಲ್ ಉಲಮಾ 4ನೇ ವಾರ್ಷಿಕ ಅನುಸ್ಮರಣೆ, ಆಧ್ಯಾತ್ಮಿಕ ಸಮ್ಮೇಳನ

Update: 2023-05-24 11:11 IST

ಮಂಗಳೂರು, ಮೇ 24: ಮಂಜನಾಡಿ ಅಲ್ ಮದೀನ ಸಂಸ್ಥೆಯ ಸಂಸ್ಥಾಪಕ ಮರ್ಹೂಂ ಶೈಖುನಾ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್‌ರ ನಾಲ್ಕನೇ ವಾರ್ಷಿಕ ಅನುಸ್ಮರಣೆ ಕಾರ್ಯಕ್ರಮ ಮೇ 25ರಂದು ಅಲ್ ಮದೀನಾ ಸಂಸ್ಥೆಯಲ್ಲಿ ಜರುಗಲಿದೆ.

ಖತಮುಲ್ ಕುರ್‌ಆನ್, ಮೌಲಿದ್ ಪಾರಾಯಣ, ಸಾಮೂಹಿಕ ಝಿಯಾರತ್, ಪ್ರಾರ್ಥನಾ ಸಂಗಮ, ಬುರ್ದಾ ಮಜ್ಲಿಸ್ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದೆ.

ಸಂಜೆ 5ಕ್ಕೆ ಆಧ್ಯಾತ್ಮಿಕ ಮಹಾ ಸಮ್ಮೇಳನ ನಡೆಯಲಿದೆ. ಸೈಯದ್ ಕೂರತ್ ತಂಙಳ್, ಸೈಯದ್‌ ಆಟಕೋಯ ತಂಙಳ್ ಕುಂಬೋಳ್, ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್, ಶಾಸಕ ಯು.ಟಿ.ಖಾದರ್, ಹಾಜಿ ವೈ.ಅಬ್ದುಲ್ಲ ಕುಂಞಿ, ಅಶ್ರಫ್ ತಂಙಳ್ ಆದೂರ್, ಮಹ್ಮೂದುಲ್ ಫೈಝಿ ವಾಲೆಮುಂಡೇವು, ಸೈಯದ್ ಇಸ್ಮಾಯೀಲ್ ತಂಙಳ್ ಉಜಿರೆ, ಡಾ.ಹಝ್ರತ್ ಫಾಝಿಲ್ ರಝ್ವಿ ಕಾವಳಕಟ್ಟೆ, ಶಾಫಿ ಸಅದಿ, ಎಮ್ಮೆಸ್ಸೆಂ ಅಬ್ದುರ್ರಶೀದ್ ಝೈನಿ, ಅಬೂ ಸುಫ್ಯಾನ್ ಇಬ್ರಾಹೀಂ ಮದನಿ, ಅಬ್ದುಲ್ ಹಫೀಲ್ ಸಅದಿ, ಹಾಫಿಲ್ ಸುಫ್ಯಾನ್ ಸಖಾಫಿ ಮತ್ತಿತರರು ಗಣ್ಯರು ಭಾಗವಹಿಸಲಿದ್ದಾರೆ.

ಮೌಲಾನ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಮುಖ್ಯ ಭಾಷಣ ಮಾಡುವರು. ಬಾಯಾರ್ ತಂಙಳ್ ಸಮಾರೋಪ ದುಆಗೈಯುವರು.

ಇದೇ ಸಂದರ್ಭ ಅಲ್ ಮದೀನದ 30ನೇ ವಾರ್ಷಿಕೋತ್ಸವದ ದಿನಾಂಕ ಘೋಷಣೆ, ಸಂಸ್ಥೆಯ ನೂತನ ಲೋಗೋ ಅನಾವರಣಗೊಳಿಸಲಾಗುವುದು ಎಂದು ಅಲ್ ಮದೀನ ಸಂಸ್ಥೆಯ ಜನರಲ್ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Similar News