×
Ad

ಎನ್‌ಡಿಟಿವಿ ತೊರೆದ ಮತ್ತೊಬ್ಬ ಹಿರಿಯ ಪತ್ರಕರ್ತೆ ಸಾರಾ ಜೇಕಬ್

Update: 2023-05-24 12:37 IST

ಹೊಸದಿಲ್ಲಿ: ಎನ್‌ಡಿಟಿವಿ ಆ್ಯಂಕರ್ ಹಾಗೂ  ಹಿರಿಯ ಸಂಪಾದಕಿ ಸಾರಾ ಜೇಕಬ್ ಅವರು ಸುದ್ದಿ ವಾಹಿನಿಗೆ ರಾಜೀನಾಮೆ ನೀಡಿದ್ದಾರೆ.ಈ ಮೂಲಕ ಎನ್‌ಡಿಟಿವಿಗೆ ರಾಜೀನಾಮೆ ನೀಡಿದ ಪ್ರಮುಖರ  ಪಟ್ಟಿಗೆ ಹೊಸ ಸೇರ್ಪಡೆಯಾಗಿದ್ದಾರೆ.  

20 ವರ್ಷಗಳಿಂದ ಎನ್‌ಡಿಟಿವಿಯಲ್ಲಿ ಕೆಲಸ ಮಾಡಿದ್ದ ಜೇಕಬ್ ಅವರು ‘ವಿ ದಿ ಪೀಪಲ್’ ಕಾರ್ಯಕ್ರಮವನ್ನು ಕೂಡ  ನಡೆಸಿಕೊಡುತ್ತಿದ್ದರು.

NDTV ಸಿಬ್ಬಂದಿಗೆ ಕಳುಹಿಸಿರುವ ಇಮೇಲ್‌ನಲ್ಲಿ, ಜೇಕಬ್ ಅವರು  NDTV ಅನ್ನು "ಅತ್ಯಂತ ಸೃಜನಶೀಲ ಹಾಗೂ  ಚಾಲಿತ ವರದಿಗಾರರಿಂದ ತುಂಬಿದ್ದ ಅದ್ಭುತ ನ್ಯೂಸ್‌ರೂಮ್" ಎಂದು ವಿವರಿಸಿದ್ದಾರೆ.

''ಕಳೆದ ರಾತ್ರಿ ರಾಜೀನಾಮೆ ನೀಡಿದ್ದೇನೆ ಹಾಗೂ  ಎನ್‌ಡಿಟಿವಿ ನನಗೆ ನೀಡಿದ ಮತ್ತು ನೀಡುತ್ತಿರುವ ಎಲ್ಲದಕ್ಕೂ ಶಾಶ್ವತವಾಗಿ ಕೃತಜ್ಞರಾಗಿರುತ್ತೇನೆ'' ಎಂದು ಸಾರಾ ಜೇಕಬ್ ಟ್ವೀಟ್ ಮಾಡಿದ್ದಾರೆ.

ಚಾನೆಲ್ ಅನ್ನು ಅದಾನಿ ಗ್ರೂಪ್ ಸ್ವಾಧೀನಪಡಿಸಿಕೊಂಡ ನಂತರ NDTV ಗೆ ರಾಜೀನಾಮೆ ನೀಡಿರುವವರ ಪಟ್ಟಿಗೆ  ಜೇಕಬ್ ಹೊಸ ಸೇರ್ಪಡೆಯಾಗಿದ್ದಾರೆ.  ಪ್ರಣಯ್ ಹಾಗೂ  ರಾಧಿಕಾ ರಾಯ್ ಕಳೆದ ನವೆಂಬರ್‌ನಲ್ಲಿ ಎನ್‌ಡಿಟಿವಿ ಪ್ರವರ್ತಕ ಆರ್‌ಆರ್‌ಪಿಆರ್‌ಎಚ್ ಮಂಡಳಿಯ ನಿರ್ದೇಶಕ ಸ್ಥಾನ ತ್ಯಜಿಸಿದ್ದರು.  ನಂತರ ಖ್ಯಾತ ಪತ್ರಕರ್ತ ರವೀಶ್ ಕುಮಾರ್ ವಾಹಿನಿಗೆ ರಾಜೀನಾಮೆ ನೀಡಿದ್ದರು.

ಜನವರಿಯ ಆರಂಭದಲ್ಲಿ, ಮುಖ್ಯ ಕಾರ್ಯತಂತ್ರ ಅಧಿಕಾರಿ ಅರಿಜಿತ್ ಚಟರ್ಜಿ ಮತ್ತು ಮುಖ್ಯ ತಂತ್ರಜ್ಞಾನ ಮತ್ತು ಪ್ರೊಡೆಕ್ಟ್  ಅಧಿಕಾರಿ ಕವಾಲ್ಜಿತ್ ಸಿಂಗ್ ಬೇಡಿ ಅವರಂತೆಯೇ ಸುದ್ದಿವಾಹಿನಿಯ ಗುಂಪಿನ ಅಧ್ಯಕ್ಷೆ ಸುಪರ್ಣಾ ಸಿಂಗ್ ರಾಜೀನಾಮೆ ನೀಡಿದ್ದರು. ಎನ್‌ಡಿಟಿವಿಯೊಂದಿಗಿನ ತನ್ನ ಮೂರು ದಶಕಗಳ ಪ್ರಯಾಣವು ಕೊನೆಗೊಂಡಿದೆ ಎಂದು ಶ್ರೀನಿವಾಸನ್ ಜೈನ್ ನಂತರ ಘೋಷಿಸಿದ್ದರು. ಮೂರು ದಿನಗಳ ನಂತರ, ನಿಧಿ ರಾಝ್ದಾನ್ ಕೂಡ ತಮ್ಮ ರಾಜೀನಾಮೆಯನ್ನು ಟ್ವೀಟ್ ಮಾಡಿದ್ದರು.

Similar News