ಕುವೈಟ್ : ಸಂಸತ್ ವಿಸರ್ಜಿಸುವ ನಿರ್ಧಾರ ಎತ್ತಿಹಿಡಿದ ಕೋರ್ಟ್

Update: 2023-05-24 17:53 GMT

ಕುವೈಟ್: 2022ರ ಸೆಪ್ಟಂಬರ್ ನಲ್ಲಿ ನಡೆದ ಸಂಸತ್ ಚುನಾವಣೆಯನ್ನು ಅಮಾನ್ಯಗೊಳಿಸುವ ತನ್ನ ತೀರ್ಪನ್ನು ಕುವೈಟ್‍ನ ಸಾಂವಿಧಾನಿಕ ನ್ಯಾಯಾಲಯ ಬುಧವಾರ ಎತ್ತಿಹಿಡಿದಿದೆ.

ಈ ಚುನಾವಣೆಯಲ್ಲಿ ಪ್ರತಿಪಕ್ಷಗಳು ಮೇಲುಗೈ ಸಾಧಿಸಿದ್ದವು. ಈ ಚುನಾವಣೆಯನ್ನು ಅಮಾನ್ಯಗೊಳಿಸಿ ಸಾಂವಿಧಾನಿಕ ನ್ಯಾಯಾಲಯ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ 2022ರ ಸಂಸತ್‍ನ ಸದಸ್ಯರು ಸಲ್ಲಿಸಿದ್ದ  ಮೇಲ್ಮನವಿಯನ್ನು ಬುಧವಾರ ಸಾಂವಿಧಾನಿಕ ನ್ಯಾಯಾಲಯ ತಳ್ಳಿಹಾಕಿದೆ. ಇದರೊಂದಿಗೆ  ಶಾಸಕಾಂಗ ಚುನಾವಣೆ ನಿಗದಿತ ದಿನವಾದ  ಜೂನ್ 6ರಂದೇ ನಡೆಯಲಿದೆ ಎಂದು ವರದಿಯಾಗಿದೆ.

2022ರ ಚುನಾವಣೆ ಅಮಾನ್ಯ ಎಂದು ಕೋರ್ಟ್ ತೀರ್ಪಿತ್ತ ಬಳಿಕ ಮಾರ್ಚ್‍ನಲ್ಲಿ ಸಂಸತ್ತನ್ನು ವಿಸರ್ಜಿಸಿ,  2020ರ ಚುನಾವಣೆಯ ಸಂಯೋಜನೆಯೊಂದಿಗೆ ಸಂಸತ್ತನ್ನು ಮರುಸ್ಥಾಪಿಸಲಾಯಿತು. ಆದರೆ ಮೇ ತಿಂಗಳಿನಲ್ಲಿ ಈ ಸಂಸತ್ತನ್ನೂ ವಿಸರ್ಜಿಸಿ, ಜೂನ್‍ನಲ್ಲಿ ಹೊಸ ಚುನಾವಣೆಗೆ ದಿನ ನಿಗದಿಗೊಳಿಸಲಾಗಿದೆ. 

Similar News