×
Ad

ರಾಜ್ಯಮಟ್ಟದ ಮ್ಯಾನೇಜ್‌ಮೆಂಟ್ -ಸಾಂಸ್ಕೃತಿಕ ಹಬ್ಬ ಉದ್ಘಾಟನೆ

Update: 2023-05-25 20:23 IST

ಕುಂದಾಪುರ: ಮೂಡ್ಲಕಟ್ಟೆ ಎಂಐಟಿ ಕಾಲೇಜಿನ ಎಂ.ಬಿ.ಎ ವಿಭಾಗದ ವತಿಯಿಂದ ‘ಯುವ-2023’ ರಾಜ್ಯಮಟ್ಟದ ಅಂತರ ಕಾಲೇಜು ಮ್ಯಾನೇಜ್‌ಮೆಂಟ್ ಮತ್ತು ಸಾಂಸ್ಕೃತಿಕ ಹಬ್ಬ ಕಾಲೇಜಿನ ಸಂಭಾಗಣದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿಯ ಅಜ್ಜರಕಾಡಿನ ಡಾ.ಜಿ. ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಭಾಸ್ಕರ್ ಶೆಟ್ಟಿ ಮಾತನಾಡಿ, ದೇಶವನ್ನು ಸಧೃಡವಾಗಿ ಕಟ್ಟುವಲ್ಲಿ ಯುವ ಜನತೆಯ ಪಾತ್ರ ಮಹತ್ವದ್ದು. ಅಮೂಲ್ಯವಾದ ಭಾರತೀಯ ಸಂಸ್ಕೃತಿಯನ್ನು ಮುಂದುವರಿಸಲು ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳುವುದು ಅತ್ಯಅವಶ್ಯ ಎಂದು ಹೇಳಿದರು.

ಐಎಂಜೆ ಸಂಸ್ಥೆಗಳ ನಿರ್ದೇಶಕ ಪ್ರೊ.ದೋಮ ಚಂದ್ರಶೇಖರ್ ಮಾತನಾಡಿ, ವಿದ್ಯಾರ್ಥಿಗಳು ಆತ್ಮವಿಶ್ವಾಸ, ಸಹಾನುಭೂತಿ, ಸೃಜನಶೀಲ ಹಾಗೂ ಚಿಕ್ಕ ಮಗುವಿನಂತೆ ಕೂತುಹಲವನ್ನು ಸದಾ ಬೆಳೆಸಿಕೊಳ್ಳುವುದು ಬಹಳ ಮುಖ್ಯ ಮತ್ತು ಕೆಲಸಗಳನ್ನು ವಿಭಿನ್ನವಾಗಿ ಮಾಡಿ ತೋರಿಸುವ ಸಾಮರ್ಥ್ಯವನ್ನು ಹೊಂದಬೇಕು ಎಂದು ಅಭಿಪ್ರಾಯ ಪಟ್ಟರು.

ಕಾಲೇಜಿನ ಪ್ರಾಂಶುಪಾಲ ಡಾ.ಅಬ್ದುಲ್ ಕರೀಂ, ಐ.ಎಂ.ಜೆ.ಐ.ಎಸ್.ಸಿ ವಿದ್ಯಾ ಸಂಸ್ಥೆಗಳ ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕ ಡಾ.ರಾಮಕೃಷ್ಣ ಹೆಗ್ಡೆ, ಐ.ಎಂ.ಜೆ.ಐ.ಎಸ್.ಸಿ ಪ್ರಾಂಶುಪಾಲೆ ಡಾ.ಪ್ರತಿಭಾ ಎಂ.ಪಟೇಲ್, ಎಂಐಟಿಕೆ ಉಪಪಾಂಶುಪಾಲ ಪ್ರೊ.ಮೆಲ್ವಿನ್ ಡಿಸೋಜ, ಡೀನ್ ಟಿ.ಪಿ.ಐ.ಆರ್. ಪ್ರೊ. ಅಮೃತಮಾಲಾ, ಎಂಬಿಎ ವಿಭಾಗ ಮುಖ್ಯಸ್ಥ ಪ್ರೊ.ಹರೀಶ ಕಾಂಚನ್ ಮೊದಲಾದವರು ಉಪಸ್ಥಿತರಿದ್ದರು.

ಸಿಂಚನಾ ಶೆಟ್ಟಿ ಸ್ವಾಗತಿಸಿದರು. ನಮೃತಾ ಅತಿಥಿಗಳನ್ನು ಪರಿಚಯಿಸಿದರು. ಸೃಷ್ಠಿ ಕುಂದರ್ ವಂದಿಸಿದರು. ಕಾರ್ತಿಕ್ ಕಾರ್ಯಕ್ರಮ ನಿರೂಪಿಸಿದರು.

Similar News