ಪ್ರಚೋದನಕಾರಿ ಹೇಳಿಕೆ ಆರೋಪ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ವಕೀಲರ ದೂರು

Update: 2023-05-27 09:45 GMT

ಹೊಸದಿಲ್ಲಿ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Congress President Mallikarjun Kharge), ದಿಲ್ಲಿ  ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ  ಇತರರ ವಿರುದ್ಧ ಸುಪ್ರೀಂ ಕೋರ್ಟ್ ವಕೀಲರೊಬ್ಬರು ಶನಿವಾರ ದೂರು ದಾಖಲಿಸಿದ್ದು, ಮೇ 28 ರಂದು ಉದ್ಘಾಟನೆಗೊಳ್ಳಲಿರುವ ನೂತನ ಸಂಸತ್ ಭವನ ವಿಚಾರವನ್ನು ಪ್ರಸ್ತಾವಿಸುವಾಗ ರಾಷ್ಟ್ರಪತಿ  ದ್ರೌಪದಿ ಮುರ್ಮು ಅವರ ಜಾತಿಯನ್ನು ಉಲ್ಲೇಖಿಸಿ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ

ಸಮುದಾಯಗಳು/ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸಲು ಜಾತಿಯ ಆಧಾರದ ಮೇಲೆ ಹಾಗೂ  ಚುನಾಯಿತ ಸರಕಾರದ ವಿರುದ್ಧ ಪ್ರಭಾವಿ ರಾಜಕೀಯ ನಾಯಕರು ನೀಡಿರುವ ಇಂತಹ ಹೇಳಿಕೆಗಳು ಅತ್ಯಂತ ಖಂಡನೀಯ ಎಂದು ದೂರುದಾರರು ಹೇಳಿದ್ದಾರೆ.

ಪ್ರಭಾವಿ ರಾಜಕೀಯ ನಾಯಕರ ವಿರುದ್ಧ ಪ್ರಥಮ ಮಾಹಿತಿ ವರದಿಯನ್ನು ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ದೂರುದಾರರು ದಿಲ್ಲಿ ಪೊಲೀಸ್ ಆಯುಕ್ತರಾದ  ಸಂಜಯ್ ಅರೋರಾ ಅವರನ್ನು ವಿನಂತಿಸಿಕೊಂಡಿದ್ದಾರೆ.

ಸುಪ್ರೀಂ ಕೋರ್ಟ್‌ನ ವಕೀಲ ಹಾಗೂ  ಸಾಮಾಜಿಕ ಕಾರ್ಯಕರ್ತ ವಿನೀತ್ ಜಿಂದಾಲ್ ಅವರು ದೂರು ದಾಖಲಿಸಿದ್ದಾರೆ.

Similar News