ಮಂಗಳೂರು: ವಿಮಾನ ಪ್ರಯಾಣದ ‘ಟಿಕೆಟ್’ನಲ್ಲಿ ವಂಚನೆ; ಪ್ರಕರಣ ದಾಖಲು

Update: 2023-05-27 14:02 GMT

ಮಂಗಳೂರು, ಮೇ 27: ವಿಮಾನ ಪ್ರಯಾಣದ ಟಿಕೆಟ್ ಬುಕ್ ಮಾಡಿಸಿಕೊಂಡು ಬಳಿಕ 1.31 ಲ.ರೂ. ವಂಚಿಸಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ಬಗ್ಗೆ ಬಂದರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಝೈನುಲ್ ಆಬಿದೀನ್ ನಗರದ ಕೆ.ಎಸ್. ರಾವ್ ರೋಡ್‌ನಲ್ಲಿರುವ ಸಿಂಗಾಪುರ ಸಿಟಿ ಕಟ್ಟಡದಲ್ಲಿ ಶುಕ್ರಿಯಾ ಟ್ರಾವೆಲ್ಸ್ ಏಜೆನ್ಸಿಯನ್ನು ನಡೆಸುತ್ತಿದ್ದು, ಕೆಲವು ವರ್ಷಗಳ ಹಿಂದೆ ಅವರಿಗೆ ದಿಲ್ಲಿಯ ಕರಿಯರ್ ಏಷ್ಯಾ ಟ್ರಾವೆಲ್ ಎಜೆನ್ಸಿಯ ಮಾಲಕ ಅಬು ಹಿಲಾಲ್ ಅಜ್ಮಿಯ ಪರಿಚಯವಾಗಿತ್ತು ಎನ್ನಲಾಗಿದೆ. ಬಳಿಕ ಅವರು ಇತರ ಪ್ರಯಾಣಿಕರಿಗಾಗಿ ವಿಮಾನ ಪ್ರಯಾಣದ ಟಿಕೆಟ್ ಬುಕ್ ಮಾಡಿಸುತ್ತಿದ್ದರು ಎಂದು ಹೇಳಲಾಗಿದೆ.

2022ರ ನ.19 ಮತ್ತು 20ರಂದು 1,31,600 ರೂ. ಮೊತ್ತದ ಟಿಕೆಟ್ ಬುಕ್ ಮಾಡಿಸಿದ್ದರಲ್ಲದೆ, ಹಣವನ್ನು ಒಂದು ವಾರದ ಬಳಿಕ ನೀಡುವುದಾಗಿ ಹೇಳಿದ್ದರೂ ಹಣ ನೀಡಿರಲಿಲ್ಲ. ಕರೆ ಮಾಡಿದಾಗ ಖಾತೆಗೆ ಹಣ ಕಳುಹಿಸುವುದಾಗಿ ತಿಳಿಸಿ ಹಣಕಾಸು ವ್ಯವಹಾರದ ಮೊಬೈಲ್ ಸ್ಕ್ರೀನ್ ಶಾಟ್ ಕಳುಹಿಸಿದ್ದರು. ಆದರೆ ಬ್ಯಾಂಕ್‌ಗೆ ಹೋಗಿ ಪರಿಶೀಲಿಸಿದಾಗ ಹಣ ಜಮೆಯಾಗಿರಲಿಲ್ಲ. ಅಬು ಹಿಲಾಲ್ ಅಜ್ಮಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ವಂಚಿಸಿದ್ದಾರೆ ಎಂದು ದೂರಲ್ಲಿ ತಿಳಿಸಲಾಗಿದೆ.

Similar News