ಗುಲಾಮಿ ಮನಸ್ಥಿತಿಗೆ ಸಾವರ್ಕರ್ ಅವರ ನಿರ್ಭಯ, ಆತ್ಮಗೌರವದ ವ್ಯಕ್ತಿತ್ವ ಸಹಿಸಲಾಗುವುದಿಲ್ಲ: ಪ್ರಧಾನಿ ಮೋದಿ ವಾಗ್ದಾಳಿ

Update: 2023-05-28 09:21 GMT

ಹೊಸ ದಿಲ್ಲಿ: ರವಿವಾರ ಹಿಂದುತ್ವವಾದಿ ವಿ.ಡಿ.ಸಾವರ್ಕರ್ ಅವರನ್ನು ಕೊಂಡಾಡಿದ ಪ್ರಧಾನಿ ನರೇಂದ್ರ ಮೋದಿ, ಗುಲಾಮಿ ಮನಸ್ಥಿತಿಗೆ ಅವರ ಸಾಮರ್ಥ್ಯ, ನಿರ್ಭಯ ಹಾಗೂ ಆತ್ಮಗೌರವದ ವ್ಯಕ್ತಿತ್ವವನ್ನು ಸಹಿಸಲಾಗುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

'ಮನ್ ಕಿ ಬಾತ್' ಪ್ರಸಾರದಲ್ಲಿ ಸಾವರ್ಕರ್ ಅವರಿಗೆ ಅವರ ಜನ್ಮದಿನದಂದು ಗೌರವ ಸಲ್ಲಿಸಿರುವ ಪ್ರಧಾನಿ ನರೇಂದ್ರ ಮೋದಿ, ಸಾವರ್ಕರ್ ಅವರ ಬದ್ಧತೆ, ಬಲಿದಾನ ಹಾಗೂ ಧೈರ್ಯ ನಮ್ಮನ್ನು ಸ್ಫೂರ್ತಗೊಳಿಸುತ್ತಲೇ ಸಾಗುತ್ತದೆ ಎಂದು ಹೇಳಿದ್ದಾರೆ.

ಇಂದು ಶ್ರೇಷ್ಠ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರ ಜನ್ಮದಿನವಾಗಿದೆ. ಅವರು ಕಾಲಾಪಾನಿ ಶಿಕ್ಷೆಗೊಳಗಾದ ಅಂಡಮಾನ್‌ನ ಸೆಲ್ಯುಲಾರ್ ಜೈಲಿಗೆ ನಾನು ಭೇಟಿ ನೀಡಿದ ದಿನವನ್ನು ಮರೆಯಲಾರೆ ಎಂದು ಅವರು ಸ್ಮರಿಸಿದ್ದಾರೆ.

"ವೀರ ಸಾವರ್ಕರ್ ಅವರು ಸಾಮಾಜಿಕ ಸಮಾನತೆ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಏನೆಲ್ಲ ಮಾಡಿದ್ದರೋ ಅದನ್ನು ಈಗಲೂ ಸ್ಮರಿಸಲಾಗುತ್ತದೆ" ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನ ಲೋಕಸಭಾಧ್ಯಕ್ಷ ಓಂ ಬಿರ್ಲಾ, ಹಲವಾರು ಕೇಂದ್ರ ಸಚಿವರು, ಸಂಸದರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಹಳೆಯ ಸಂಸತ್ ಭವನದ ಕೇಂದ್ರ ಸಭಾಂಗಣದಲ್ಲಿ ಸಾವರ್ಕರ್ ಅವರಿಗೆ ಪುಷ್ಪನಮನ ಸಲ್ಲಿಸಿದರು.

Similar News