ಚಿರತೆಗಳ ಸಾವು ಮತ್ತು ಚೀತಾ ಯೋಜನೆಯ ಸವಾಲು

Update: 2023-05-29 04:43 GMT

ದಕ್ಷಿಣ ಆಫ್ರಿಕಾದಲ್ಲಿ ಚಿರತೆಯ ಸಂಖ್ಯೆ ಹೆಚ್ಚಿಸಲು ಕೈಗೊಂಡ ಕ್ರಮಗಳು ಈ ನಿಟ್ಟಿನಲ್ಲಿ ಭರವಸೆದಾಯಕವಾಗಿವೆ. 2018ರ ಅಧ್ಯಯನವೊಂದು ದಕ್ಷಿಣ ಆಫ್ರಿಕಾದಲ್ಲಿ ಚೀತಾಗಳ ಸಂತತಿವೃದ್ಧಿ ಯೋಜನೆಯ ಮೇಲೆ ಬೆಳಕು ಚೆಲ್ಲಿದೆ. ಚಿರತೆಗಳಿಗಿರುವ ಪ್ರಮುಖ ಅಪಾಯಗಳನ್ನು ಪತ್ತೆಹಚ್ಚುವುದು ಮತ್ತು ಅದರಿಂದ ಚಿರತೆಗಳನ್ನು ಪಾರುಮಾಡಲು ಅವುಗಳ ವಾಸಸ್ಥಳವನ್ನು ಅಗತ್ಯಕ್ಕನುಸಾರವಾಗಿ ಬದಲಿಸುವುದು ಇವು ಈ ಯೋಜನೆಯಲ್ಲಿ ಅನುಸರಿಸಲಾಗಿದ್ದ ಕ್ರಮಗಳು.

ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಮತ್ತೆ ದುರಂತ ಸಂಭವಿಸಿರುವ ವರದಿ ಬಂದಿದೆ. ಸತತವಾಗಿ ಮೂರು ಚಿರತೆಗಳ ಸಾವಿನ ಬಳಿಕ ಈಗ ಮೂರು ಚಿರತೆ ಮರಿಗಳು ಸಾವನ್ನಪ್ಪಿವೆ ಎಂದು ಗೊತ್ತಾಗಿದೆ. ಮಾರ್ಚ್ 29ರಂದು ನಮೀಬಿ ಯಾದ ಚಿರತೆ ಸಿಯಾಯಾ ಅಕಾ ಜ್ವಾಲಾ ನಾಲ್ಕು ಚಿರತೆ ಮರಿಗಳಿಗೆ ಜನ್ಮ ನೀಡಿತ್ತು. ಅವುಗಳಲ್ಲಿ ಹೆಣ್ಣು ಚಿರತೆ ಮರಿ ಮೊನ್ನೆ ಮಂಗಳವಾರ ಸಾವಿಗೀಡಾಗಿತ್ತು.

ಆದರೆ ಅದೇ ದಿನವೇ ಇನ್ನೆರಡು ಮರಿಗಳೂ ಸಾವನ್ನಪ್ಪಿದ್ದರೂ ಇಲಾಖೆ ಗುರುವಾರದವರೆಗೂ ಬಹಿರಂಗಪಡಿಸಿರಲಿಲ್ಲ, ಅದಕ್ಕೆ ಕಾರಣವನ್ನೂ ನೀಡಿಲ್ಲ ಎಂದು ವರದಿಯಾಗಿದೆ.

ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಈಗ 17 ವಯಸ್ಕ ಮತ್ತು ಅರೆ ವಯಸ್ಕ ನಮೀಬಿಯನ್ ಮತ್ತು ದಕ್ಷಿಣ ಆಫ್ರಿಕಾದ ಚೀತಾಗಳು ಮತ್ತು ನಮೀಬಿಯಾದ ತಾಯಿಗೆ ಜನಿಸಿದ ಒಂದು ಮರಿ ಮಾತ್ರ ಉಳಿದಿವೆ. ಈ ವರ್ಷ ಮಾರ್ಚ್ನಲ್ಲಿ ನಮೀಬಿಯಾದ ಹೆಣ್ಣು ಚಿರತೆ ಸಾಶಾ ಮೂತ್ರಪಿಂಡದ ಕಾಯಿಲೆಯಿಂದ ಸಾವನ್ನಪ್ಪಿದ್ದಾಗ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಚಿರತೆಯ ಸಾವಿನ ಸರಣಿ ಪ್ರಾರಂಭವಾಯಿತು. ನಂತರ, ಎಪ್ರಿಲ್ 23ರಂದು ಉದಯ್ ಎಂಬ ಹೆಸರಿನ ದಕ್ಷಿಣ ಆಫ್ರಿಕಾದ ಗಂಡು ಚಿರತೆ ಹೃದಯದ ಶ್ವಾಸಕೋಶದ ವೈಫಲ್ಯದಿಂದ ಸಾವನ್ನಪ್ಪಿತು. ಆದಾದ 16 ದಿನಗಳ ನಂತರ ದಕ್ಷಿಣ ಆಫ್ರಿಕಾದ ಹೆಣ್ಣು ಚಿರತೆ ದಕ್ಷಾ ಸಾವನ್ನಪ್ಪಿರುವುದಾಗಿ ವರದಿಯಾಗಿತ್ತು.

ಸೆಪ್ಟಂಬರ್ 17, 2022ರಲ್ಲಿ ನಮೀಬಿಯಾದಿಂದ ತಂದ 8 ಚಿರತೆ ಗಳನ್ನು ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಡಲಾಗಿತ್ತು. ನಂತರ ದಕ್ಷಿಣ ಆಫ್ರಿಕಾದಿಂದ ಇನ್ನೂ 12 ಚಿರತೆಗಳನ್ನು ತರಲಾಯಿತು. ಅವುಗಳನ್ನೂ ಫೆಬ್ರವರಿ 18ರಂದು ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡಲಾಯಿತು. ಚಿರತೆಗಳ ಈ ಸಾವುಗಳು ದುರದೃಷ್ಟಕರ. ನಮೀಬಿಯಾದ ಚಿರತೆ ಗಳನ್ನು ತಂದಾಗ, ಮೊದಲ ವರ್ಷದಲ್ಲಿ ಕನಿಷ್ಠ ಅರ್ಧದಷ್ಟಾದರೂ ಬದುಕುಳಿಯುವಂತಾಗಬೇಕೆಂಬುದು ಚೀತಾ ಯೋಜನೆಯ ಗುರಿಯಾಗಿತ್ತು. ಹಾಗಾಗಿ, ಮಧ್ಯಪ್ರದೇಶ ಸರಕಾರಕ್ಕೆ ಚಿರತೆಗಳ ಈ ಸಾವು ಅನಿರೀಕ್ಷಿತವಾಗಿರಲಿಲ್ಲ ಎಂಬುದು ಗೊತ್ತಾಗುತ್ತದೆ. ಅರ್ಧದಷ್ಟನ್ನಾ ದರೂ ಉಳಿಸಿಕೊಳ್ಳುವ ಗುರಿ ಸಾಧ್ಯವಾಗುವುದಾದರೆ, 20 ಚಿರತೆಗಳಲ್ಲಿ 10 ಮಾತ್ರ ತಮ್ಮ ಮೊದಲ ವರ್ಷದಲ್ಲಿ ಬದುಕುಳಿಯುತ್ತವೆ.

ಈಗ ಎದ್ದಿರುವ ಪ್ರಶ್ನೆಯೆಂದರೆ, ಉಳಿದ 17 ಚಿರತೆಗಳನ್ನು ಕುನೊದಲ್ಲಿ ಮಾತ್ರ ಇರಿಸಬೇಕೇ ಅಥವಾ ಬೇರೆಡೆಗೂ ಸ್ಥಳಾಂತರಿಸಬೇಕೇ ಎಂಬುದು. ಮಧ್ಯಪ್ರದೇಶದ ಗಾಂಧಿ ಸಾಗರ್ ಅಭಯಾರಣ್ಯದಲ್ಲಿ ಮತ್ತು ರಾಜಸ್ಥಾನದ ಮುಕುಂದ್ರ ಹಿಲ್ಸ್ ಟೈಗರ್ ರಿಸರ್ವ್ನಲ್ಲಿ ಕೆಲವು ಚಿರತೆಗಳನ್ನು ಇಡುವ ಚಿಂತನೆಯೂ ನಡೆದಿರುವ ಬಗ್ಗೆ ಈಗಾಗಲೇ ವರದಿಗಳಿವೆ. ಕುನೊದಲ್ಲಿನ ಸಿಬ್ಬಂದಿಗೆ ಎಲ್ಲಾ ಚಿರತೆಗಳ ಆರೋಗ್ಯ ಪರಿಸ್ಥಿತಿಯನ್ನು ನೋಡಿಕೊಳ್ಳುವುದು ಮತ್ತು ಅವುಗಳ ಬದುಕುಳಿ ಯುವಿಕೆ ಪ್ರಮಾಣವನ್ನು ಕಾಯ್ದುಕೊಳ್ಳುವುದು ಏಕಕಾಲದಲ್ಲಿ ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗಿದೆ.

ಸಾಮಾನ್ಯವಾಗಿ ಚಿರತೆಗಳು ಸಾಯಲು ಕಾರಣವೇನು? 2000 ಮತ್ತು 2010ರ ದಶಕದ ಅಧ್ಯಯನಗಳ ಆಧಾರದ ಮೇಲೆ ಹೇಳುವು ದಾದರೆ, ಚಿರತೆಗಳ ಸಾವುಗಳು ಹೆಚ್ಚಾಗಿ ಯಕೃತ್ತಿನ ಸಿರೋಸಿಸ್, ನ್ಯುಮೋನಿಯಾ, ಶ್ವಾಸನಾಳದ ಕಾಯಿಲೆಗಳು, ರಿಕೆಟ್ಸ್ ಮತ್ತು ಕ್ಷಯರೋಗದಂಥವುಗಳ ಪರಿಣಾಮವಾಗಿವೆ.

ನಮೀಬಿಯಾದ ವಿಚಾರವನ್ನು ನೋಡುವುದಾದರೆ, ಅಪರೂಪದ ಆದರೆ ಗಂಭೀರವಾದ ಬ್ಯಾಕ್ಟೀರಿಯಾ ಕಾಯಿಲೆ ಆಂಥ್ರಾಕ್ಸ್ ವನ್ಯ ಜೀವಿಗಳು ಮತ್ತು ಅಭಯಾರಣ್ಯಗಳಲ್ಲಿನ ಚಿರತೆಗಳಿಗೆ ಪ್ರಮುಖವಾಗಿ ಮಾರಕವಾಗಿದೆ ಎಂದು ಸಾಬೀತಾಗಿದೆ. ಸಾಮಾನ್ಯವಾಗಿ ಪ್ರಾಣಿಗಳ ನಡುವೆ ಮತ್ತು ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಆಂಥ್ರಾಕ್ಸ್ ರೋಗಲಕ್ಷಣಗಳು ಚರ್ಮದ ಮೇಲೆ ಸಣ್ಣ ಗುಳ್ಳೆಗಳು, ಉಸಿರಾಟದ ತೊಂದರೆ, ಕಿಬ್ಬೊಟ್ಟೆ ನೋವು. ಅನೇಕ ಸಂದರ್ಭಗಳಲ್ಲಿ ಇದು ಸಾವಿಗೂ ಕಾರಣವಾಗುತ್ತದೆ.

ನಮೀಬಿಯಾದ ಎಟೋಶಾ ರಾಷ್ಟ್ರೀಯ ಉದ್ಯಾನವನದಲ್ಲಿ, ಆಂಥ್ರಾಕ್ಸ್ ಸಾಮಾನ್ಯವಾಗಿ ಕಂಡುಬರುತ್ತದೆ. ಆಂಥ್ರಾಕ್ಸ್ ವಿರುದ್ಧ ಪ್ರತಿರೋಧಕ ಗುಣವನ್ನು ಬೆಳೆಸಿಕೊಂಡಿರುವ ಪ್ರಾಣಿಗಳೂ ಇವೆ. ಆದರೆ ಎಟೋಶಾ ಚಿರತೆಗಳಲ್ಲಿ ಅಂಥ ಪ್ರತಿರೋಧಕ ಶಕ್ತಿಯಿಲ್ಲ.

ಜರ್ನಲ್ ಸೈನ್ಸ್ನಲ್ಲಿ ಪ್ರಕಟವಾದ 2008ರ ಅಧ್ಯಯನವು ಹೇಳುವ ಪ್ರಕಾರ, ಚಿರತೆಯ ಸಾವಿಗೆ ಮತ್ತೊಂದು ಪ್ರಮುಖ ಕಾರಣವೆಂದರೆ, ಮೂತ್ರಪಿಂಡ ವೈಫಲ್ಯ. ಸಾಮಾನ್ಯ ಪರಿಭಾಷೆಯಲ್ಲಿ ಹೇಳುವುದಾದರೆ, ಪ್ರಾಣಿಗಳ ದೇಹದೊಳಗಿನ ಅನೇಕ ಪ್ರೊಟೀನ್ಗಳಲ್ಲಿ ಒಂದಾಗಿರುವ ಅಮಿಲಾಯ್ಡ್ ಎ ತನ್ನ ಸಹಜ ಗುಣ ಕಳೆದುಕೊಂಡು ಸಾಮಾನ್ಯ ಪ್ರೊಟೀನ್ಗಳನ್ನು ಅಸಹಜವಾಗಿ ಪರಿವರ್ತಿಸಲು ಪ್ರಾರಂಭಿಸಿದಾಗ, ಈ ಹಾನಿಗೊಳಗಾದ ಪ್ರೊಟೀನ್ಗಳು ಚಿರತೆಯ ಗುಲ್ಮ ಮತ್ತು ಯಕೃತ್ತಿನ ಅಂಗಾಂಶಗಳಲ್ಲಿ ಸೇರಿಕೊಳ್ಳುತ್ತವೆ.

ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಂತಹ ಆಫ್ರಿಕನ್ ದೇಶ ಗಳಲ್ಲಿನ ಅನೇಕ ಚಿರತೆಗಳು ಈ ಪ್ರೊಟೀನ್ ಸಂಬಂಧಿತ ಕಾಯಿಲೆಯ ಪರಿಣಾಮವಾಗಿ ಮೂತ್ರಪಿಂಡ ವೈಫಲ್ಯದಿಂದ ಸಾಯುತ್ತವೆ. 1980ರ ದಶಕದಿಂದೀಚೆಗೆ 2008ರವರೆಗೆ, ಈ ಕಾಯಿಲೆಗೆ ತುತ್ತಾಗುವ ಚಿರತೆಗಳ ಪ್ರಮಾಣ ಶೇ.20ರಿಂದ ಶೇ.70ರಷ್ಟು ಹೆಚ್ಚಿದೆ ಎಂದು ಅಧ್ಯಯನ ಹೇಳುತ್ತಿದೆ.

ದಕ್ಷಿಣ ಆಫ್ರಿಕಾದ ಚಿರತೆಗಳ ಪಾಲಿಗೆ ಮತ್ತೊಂದು ಅಪಾಯವೆಂದರೆ ಸಿಂಹದಂತಹ ಪರಭಕ್ಷಕಗಳು. ನಾಲ್ಕು ವನ್ಯಜೀವಿ ಸಂಶೋಧಕರು ಮತ್ತು ಸಂರಕ್ಷಣಾ ತಜ್ಞರು 2018ರ ಸಂಶೋಧನಾ ಪ್ರಬಂಧದಲ್ಲಿ 293 ದಕ್ಷಿಣ ಆಫ್ರಿಕಾದ ಚಿರತೆಗಳ ಸಾವಿನ ಕಾರಣಗಳನ್ನು ಅಧ್ಯಯನ ಮಾಡಿದ್ದಾರೆ. ಅದರಂತೆ, ಶೇ. 53.2ರಷ್ಟು ಸಾವುಗಳು ಪರಭಕ್ಷಕಗಳಿಂದ, ಹೆಚ್ಚಾಗಿ ಸಿಂಹಗಳಿಂದ ಸಂಭವಿಸಿವೆ. ಇನ್ನು ಮಾನವ ನಿರ್ಮಿತ ರೋಗ ಗಳು ಮತ್ತು ಮಾಲಿನ್ಯದ ಕಾರಣಕ್ಕೆ ಬಲಿಯಾಗಿರುವ ಚಿರತೆಗಳ ಪ್ರಮಾಣ ಶೇ. 26.6 ಎಂದು ಅಧ್ಯಯನ ನಿರೂಪಿಸಿದೆ.

ಭಾರತದಲ್ಲಿನ ಚಿರತೆಗಳಲ್ಲಿ ಯಾವುದೇ ಆಂಥ್ರಾಕ್ಸ್ ಪ್ರಕರಣಗಳು ವರದಿಯಾಗಿಲ್ಲ ಎಂಬುದು ಸಮಾಧಾನಕರ ಸಂಗತಿ. ಇನ್ನು, ಆಫ್ರಿಕಾ ದಂತೆ ಭಾರತದಲ್ಲಿ ದೊಡ್ಡ ಸಂಖ್ಯೆಯಲ್ಲಿ ಸಿಂಹಗಳಿಲ್ಲ. ಏಶ್ಯಟಿಕ್ ಸಿಂಹಗಳ ಜನಸಂಖ್ಯೆ ಗುಜರಾತ್ನ ಗಿರ್ ರಾಷ್ಟ್ರೀಯ ಉದ್ಯಾನವನಕ್ಕೆ ಮಾತ್ರ ಸೀಮಿತವಾಗಿದೆ. ಹಾಗಾಗಿ ಸಿಂಹಗಳು ಚಿರತೆಗಳ ಮೇಲೆ ದಾಳಿ ಮಾಡುವ ಸಾಧ್ಯತೆ ಇಲ್ಲವೇ ಇಲ್ಲ.

ಆದರೂ ಕುನೊದಲ್ಲಿನ ಚಿರತೆಗಳ ಸಾವುಗಳು ಅಲ್ಲಿನ ಚಿರತೆಗಳ ಆರೋಗ್ಯದ ಮೇಲೆ ನಿಗಾ ಇಡುವ ಅಗತ್ಯವನ್ನು ಒತ್ತಿಹೇಳುತ್ತವೆ. ಈಗ ಉಳಿದಿರುವ ಚಿರತೆಗಳನ್ನು ಸಾವಿನ ಸಾಧ್ಯತೆಯಿಂದ ತಪ್ಪಿಸಲು ಮತ್ತು ಅವುಗಳ ಸಂತತಿ ಹೆಚ್ಚಿಸಲು, ಎಲ್ಲವನ್ನೂ ಒಟ್ಟಿಗೇ ಬಿಡದೆ ಹಂತಹಂತ ವಾಗಿ ಅವುಗಳನ್ನು ಉದ್ಯಾನವನದೊಳಕ್ಕೆ ಬಿಡುವ ಕ್ರಮವೊಂದರ ಬಗ್ಗೆ ಪರಿಣಿತರು ಹೇಳುತ್ತಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ಚಿರತೆಯ ಸಂಖ್ಯೆ ಹೆಚ್ಚಿಸಲು ಕೈಗೊಂಡ ಕ್ರಮ ಗಳು ಈ ನಿಟ್ಟಿನಲ್ಲಿ ಭರವಸೆದಾಯಕವಾಗಿವೆ. 2018ರ ಅಧ್ಯಯನವೊಂದು ದಕ್ಷಿಣ ಆಫ್ರಿಕಾದಲ್ಲಿ ಚೀತಾಗಳ ಸಂತತಿವೃದ್ಧಿ ಯೋಜನೆಯ ಮೇಲೆ ಬೆಳಕು ಚೆಲ್ಲಿದೆ. ಚಿರತೆಗಳಿಗಿರುವ ಪ್ರಮುಖ ಅಪಾಯಗಳನ್ನು ಪತ್ತೆಹಚ್ಚುವುದು ಮತ್ತು ಅದರಿಂದ ಚಿರತೆಗಳನ್ನು ಪಾರುಮಾಡಲು ಅವುಗಳ ವಾಸಸ್ಥಳವನ್ನು ಅಗತ್ಯಕ್ಕನುಸಾರವಾಗಿ ಬದಲಿಸುವುದು ಇವು ಈ ಯೋಜನೆಯಲ್ಲಿ ಅನುಸರಿಸಲಾಗಿದ್ದ ಕ್ರಮಗಳು.

ಉದಾಹರಣೆಗೆ, ಸಿಂಹಗಳು ಹೇರಳವಾಗಿದ್ದ ಮೀಸಲು ಪ್ರದೇಶ ಗಳಲ್ಲಿ ಕಡಿಮೆ ಸಂಖ್ಯೆಯಲ್ಲಿ ಚಿರತೆಗಳನ್ನು ಬಿಡಲಾಯಿತು. ಅವುಗಳನ್ನು ಇತರ ಮೀಸಲು ಪ್ರದೇಶಗಳಿಗೆ ವರ್ಗಾಯಿಸಲಾಯಿತು. ಅಂಥ ಕ್ರಮ ಗಳಿಂದಾಗಿ ಚಿರತೆಗಳ ಸಂಖ್ಯೆ 2012ರಲ್ಲಿ 217 ಇದ್ದದ್ದು 2018ರಲ್ಲಿ 328ಕ್ಕೆ ಏರಿತು. ಮಧ್ಯಪ್ರದೇಶ ಸರಕಾರ ಕೆಲ ಚಿರತೆಗಳನ್ನು ಕುನೊದಿಂದ ಗಾಂಧಿ ಸಾಗರ್ ಮತ್ತು ಮುಕುಂದ್ರಕ್ಕೆ ವರ್ಗಾಯಿಸುವ ಗುರಿಯನ್ನು ಹೊಂದಿದ್ದರೆ,ಅ ಅದು ಚಿರತೆಗಳ ಉಳಿವಿನ ದೃಷ್ಟಿಯಿಂದ ಅನುಕೂಲಕರವಾ ಗಬಹುದು ಎಂದು ಹೇಳಲಾಗುತ್ತಿದೆ. ಒಂದು ನಿರ್ದಿಷ್ಟ ಪ್ರದೇಶಕ್ಕೆ ಸೀಮಿತವಾದ ಅಪಾಯಗಳಿಂದ ಪಾರು ಮಾಡಲು ಈ ತೀರ್ಮಾನ ನೆರವಾಗಬಹುದು.

(ಕೃಪೆ:dailyo.in)

Similar News