ಹೊಸತಾಗಿ ನಿರ್ಮಿಸಿರುವ ರಸ್ತೆಯ ಡಾಂಬರನ್ನು ಬರಿಗೈಯ್ಯಲ್ಲಿ ಕಿತ್ತ ಗ್ರಾಮಸ್ಥರು: ಗುತ್ತಿಗೆದಾರನ ವಿರುದ್ಧ ಆಕ್ರೋಶ

Update: 2023-06-01 11:37 GMT

ಮುಂಬೈ,: ಹೊಸದಾಗಿ ನಿರ್ಮಿಸಲಾದ ರಸ್ತೆಯ ಡಾಂಬರನ್ನು ಗ್ರಾಮಸ್ಥರು ತಮ್ಮ ಬರಿಗೈಯಿಂದ ಕೀಳುತ್ತಿರುವ ವೀಡಿಯೊವೊಂದು  ಸಾಮಾಜಿಕ  ಜಾಲತಾಣದಲ್ಲಿ ವೈರಲ್ ಆಗಿದೆ.

ಹಲವಾರು ಟ್ವಿಟರ್ ಹ್ಯಾಂಡಲ್‌ಗಳು ಹೇಳಿಕೊಂಡಂತೆ ಮಹಾರಾಷ್ಟ್ರದಲ್ಲಿ ಈ ವಿಲಕ್ಷಣ ಘಟನೆ ನಡೆದಿದೆ.

ಕಾರ್ಪೆಟ್ ತರಹದ ವಸ್ತುವನ್ನು ನೇರವಾಗಿ ರಸ್ತೆಯ ಕೆಳಗೆ ಇರಿಸಲಾಗಿದೆ.   ರಸ್ತೆಯನ್ನು ಸ್ಥಳೀಯ ಗುತ್ತಿಗೆದಾರರು ನಿರ್ಮಿಸಿದ್ದಾರೆ.  38 ಸೆಕೆಂಡ್ ನ ಕ್ಲಿಪ್‌ನಲ್ಲಿ ರಾಣಾ ಠಾಕೂರ್  ಎಂಬ ಹೆಸರಿನ  ಸ್ಥಳೀಯ ಗುತ್ತಿಗೆದಾರನ ಕಳಪೆ ಕಾಮಗಾರಿಯನ್ನು ಗ್ರಾಮಸ್ಥರು ಟೀಕಿಸುತ್ತಿದ್ದಾರೆ. ಡಾಂಬರು ಕೆಳಗೆ ಕಾರ್ಪೆಟ್ ತೋರಿಸುತ್ತಾ ಈ  ಕೆಲಸ "ಬೋಗಸ್" ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ಅಂಬಾಡ್ ತಾಲೂಕಿನ ಕರ್ಜತ್-ಹಸ್ತ್ ಪೋಖಾರಿಯಲ್ಲಿ ಈ ಘಟನೆ ನಡೆದಿದೆ ಎಂದು 'ಫ್ರೀ ಪ್ರೆಸ್ ಜರ್ನಲ್'  ವರದಿ ಮಾಡಿದೆ. ಈ ರಸ್ತೆಯನ್ನು ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ (ಪ್ರಧಾನಿ ಗ್ರಾಮೀಣ ರಸ್ತೆ ಯೋಜನೆ) ಅಡಿಯಲ್ಲಿ ನಿರ್ಮಿಸಲಾಗಿದೆ.

ರಸ್ತೆ ನಿರ್ಮಾಣಕ್ಕೆ ಜರ್ಮನ್ ತಂತ್ರಜ್ಞಾನವನ್ನು ಬಳಸಿಕೊಳ್ಳುವುದಾಗಿ ಗುತ್ತಿಗೆದಾರ ಹೇಳಿಕೊಂಡಿದ್ದಾನೆ ಎಂದು 'ಫ್ರೀ ಪ್ರೆಸ್ ಜರ್ನಲ್'  ವರದಿ ಮಾಡಿದೆ.

ಸ್ಥಳೀಯರು ಮಹಾರಾಷ್ಟ್ರ ಸರಕಾರವನ್ನು ಟೀಕಿಸಿದ್ದು,  ಕಳಪೆ ಕಾಮಗಾರಿಯನ್ನು  ಅನುಮೋದಿಸಿದ ಇಂಜಿನಿಯರ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Similar News