ಗರ್ಭಿಣಿ ನಾಪತ್ತೆ

Update: 2023-06-01 16:10 GMT

ಉಡುಪಿ, ಜೂ.1: ಹೆಬ್ರಿ ತಾಲೂಕಿನ ಮುದ್ರಾಡಿ ಗ್ರಾಮದ ಬಲ್ಲಾಡಿಯ ಗುಡಾಲಬೆಟ್ಟು ನಿವಾಸಿ ಲಕ್ಷ್ಮೀ (22) ಎಂಬ 6 ತಿಂಗಳ ಗರ್ಭಿಣಿ ಮೇ 25 ರಂದು ಬೆಳಗ್ಗೆ 9ಗಂಟೆಯಿಂದ ಸಂಜೆ 5:30ರ ಮಧ್ಯಾವಧಿಯಲ್ಲಿ ಯಾರಿಗೂ ಹೇಳದೇ ಮನೆಯಿಂದ ಹೊರಟು ನಾಪತ್ತೆಯಾಗಿದ್ದಾರೆ. 

5 ಅಡಿ 3 ಇಂಚು ಎತ್ತರ, ಸಪೂರ ಶರೀರ, ಗೋಧಿ ಮೈ ಬಣ್ಣ, ಎರಡು ಹುಬ್ಬುಗಳ ಮದ್ಯೆ ಎಳ್ಳಾಕಾರದ ಮಚ್ಚೆ ಹೊಂದಿದ್ದು, ಕನ್ನಡ ಮತ್ತು ಕೊಂಕಣಿ ಭಾಷೆ ಮಾತನಾಡುತ್ತಾರೆ.

ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಹೆಬ್ರಿ ಪೊಲೀಸ್ ಠಾಣೆ ದೂ.ಸಂ.: 08253-251116, ಪಿ.ಎಸ್.ಐ ಮೊ.ಸಂ.: 9480805463, ಕಾರ್ಕಳ ವೃತ್ತ ನಿರೀಕ್ಷಕರ ದೂ.ಸಂ.: 08258-231083,.ಮೊ.ಸಂ.:9480805435 ಅನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Similar News