ಮತ್ತೆ ವಿಶ್ವದ ಶ್ರೀಮಂತ ವ್ಯಕ್ತಿಯಾದ ಎಲಾನ್ ಮಸ್ಕ್: ಅಂಬಾನಿಗೆ 13ನೇ ಸ್ಥಾನ

Update: 2023-06-01 16:27 GMT

ವಾಷಿಂಗ್ಟನ್: ಟೆಸ್ಲಾ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲಾನ್ ಮಸ್ಕ್ ಮತ್ತೊಮ್ಮೆ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಹಿರಿಮೆಗೆ ಪಾತ್ರವಾಗಿದ್ದರೆ ಭಾರತದ ಉದ್ಯಮಿಗಳಾದ ಮುಕೇಶ್ ಅಂಬಾನಿ 13ನೇ ಸ್ಥಾನ, ಗೌತಮ್ ಅದಾನಿ 19ನೇ ಸ್ಥಾನದಲ್ಲಿದ್ದಾರೆ. 

ಈ ಹಿಂದೆ ಎಲಾನ್ ಮಸ್ಕ್ ರನ್ನು ಹಿಂದಿಕ್ಕಿ ವಿಶ್ವದ ಶ್ರೀಮಂತ ವ್ಯಕ್ತಿ ಎನಿಸಿದ್ದ LVMH ಸಂಸ್ಥೆಯ ಅಧ್ಯಕ್ಷ ಬರ್ನಾರ್ಡ್ ಅರ್ನಾಲ್ಟ್ ಬುಧವಾರ ಬಿಡುಗಡೆಗೊಂಡಿರುವ ಬ್ಲೂಮ್ಬರ್ಗ್ ಕೋಟ್ಯಧಿಪತಿಗಳ ಪಟ್ಟಿಯ 500 ಶ್ರೀಮಂತರಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ಮಸ್ಕ್ ಅವರು ಚೀನಾಕ್ಕೆ ಭೇಟಿ ನೀಡಿದ ಬಳಿಕ ಟೆಸ್ಲಾ ಸಂಸ್ಥೆಯ ಶೇರುಗಳು ಭಾರೀ ಲಾಭ ಗಳಿಸಿ ಏರುಗತಿಯಲ್ಲಿ ಸಾಗಿದರೆ, ಎಲ್ವಿಎಂಎಚ್ ಶೇರುಗಳ ಮೌಲ್ಯ ಕುಸಿದಿದ್ದರಿಂದ ಅರ್ನಾಲ್ಟ್ ಗೆ ಹಿನ್ನಡೆಯಾಗಿದೆ. ಮಸ್ಕ್ ಅವರ ನಿವ್ವಳ ಸಂಪತ್ತು 192 ಶತಕೋಟಿ ಡಾಲರ್ ಗೆ ಏರಿದರೆ, ಅರ್ನಾಲ್ಟ್ ಅವರ ಸಂಪತ್ತು 187 ಶತಕೋಟಿ ಡಾಲರ್ಗೆ ಇಳಿದಿದೆ. 

ಅಮಝಾನ್ ಸ್ಥಾಪಕ ಜೆಫ್  ಬೆಝೋಸ್, ಲ್ಯಾರಿ ಎಲಿಸನ್, ಸ್ಟೀವ್ ಬಾಮರ್, ವಾರ್ನರ್ ಬಫೆಟ್, ಲ್ಯಾರಿ ಪೇಜ್, ಸೆರ್ಗೆಯ್ ಬ್ರಿನ್ ಮತ್ತು ಮಾರ್ಕ್ ಝಕರ್ಬರ್ಗ್ ಅನುಕ್ರಮವಾಗಿ 3ರಿಂದ 10ರವರೆಗಿನ ಶ್ರೇಯಾಂಕ ಪಡೆದಿದ್ದಾರೆ.

ಭಾರತದ ಉದ್ಯಮಿ ಮುಕೇಶ್ ಅಂಬಾನಿ 13ನೇ ಸ್ಥಾನದಲ್ಲಿದ್ದರೆ, ಗೌತಮ್ ಅದಾನಿ 19ನೇ ಸ್ಥಾನದಲ್ಲಿದ್ದಾರೆ.

Similar News