‘ಪಿಜಿನ್ ದ ಬಾಸೆ ನಿಗಲೆಗ್ ತೆರಿಯುಂಡಾ’ ತುಳುಕವನ ಸಂಕಲನ ಬಿಡುಗಡೆ

Update: 2023-06-03 14:10 GMT

ಉಡುಪಿ, ಜೂ.3: ತುಳು ಭಾಷೆಗೆ ಮಹತ್ವರವಾದ ಸ್ಥಾನವಿದೆ. ಮುಂದಿನ ಪೀಳಿಗೆಗೆ ಅದು ಉಳಿಸಿ ಬೆಳೆಸುವ ಕೆಲಸ ಹಿರಿಯರು ಮಾಡಬೇಕಾಗಿದೆ. ತುಳುನಾಡಿನಲ್ಲಿ ಮಾತ್ರವಲ್ಲದೆ ಈ ಭಾಷೆ ದೇಶ ವಿದೇಶದಲ್ಲಿ ಕೂಡ ತುಳು ಬಹಳಷ್ಟು ಬೆಳೆದಿದೆ ಎಂದು ಅಂಬಲಪಾಡಿ ಜನಾರ್ದನ ಮಹಾಕಾಳಿ ದೇವಸ್ಥಾನದ  ಧರ್ಮದರ್ಶಿ ಡಾ.ನಿ.ಬೀ. ವಿಜಯ ಬಲ್ಲಾಳ್ ಹೇಳಿದ್ದಾರೆ.

ಅವರು ಮೇ.3ರಂದು ಉಡುಪಿ ತುಳುಕೂಟ, ದೊಡ್ಡಣಗುಡ್ಡೆ ಕ್ಷಿಪ್ರ-ಪದ್ಮ ಪ್ರಕಾಶನದ ಆಶ್ರಯದಲ್ಲಿ   ಅಂಬಲಪಾಡಿ ದೇವಸ್ಥಾನದ ಭವಾನಿ ಮಂಟಪದಲ್ಲಿ ಶನಿವಾರ ನಡೆದ ಕಾರ್ಯ ಕ್ರಮದಲ್ಲಿ ವಾಸಂತಿ ಅಂಬಲಪಾಡಿ ಬರೆದ ‘ಪಿಜಿನ್ ದ ಬಾಸೆ ನಿಗಲೆಗ್ ತೆರಿಯುಂಡಾ’ ಎಂಬ ತುಳು ಕವನ ಸಂಕಲನ ಬಿಡುಗಡೆಗೊಳಿಸಿ ಅವರು ಮಾತನಾಡುತಿದ್ದರು.

ತುಳು ಭಾಷೆ ಮಾತನಾಡುವ ಜನ ಸಿಕ್ಕಿದರೆ ಅವರ ನಮ್ಮವರು ಎಂಬ ಭಾವನೆ ನಮ್ಮಲ್ಲಿ ಬರುತ್ತದೆ. ತುಳು ಕವಿಗೊಷ್ಟಿ, ತುಳು ಪುಸ್ತಕ ಬರೆಯುವುದರ ಮೂಲಕ ಜನರಿಗೆ ತಲುಪುವಂತ ಕೆಲಸ ಆಗಬೇಕು ಎಂದು ಅವರು ಅಭಿಪ್ರಾಯ ಪಟ್ಟರು.

ಅಧ್ಯಕ್ಷತೆ ವಹಿಸಿದ್ದ ತುಳುಕೂಟ ಉಡುಪಿ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಅಂತರಾಷ್ಟ್ರೀಯ ಮಟ್ಟದಲ್ಲಿ ತುಳು ಕವಿಗೋಷ್ಠಿ, ತುಳು ಕತೆಯನ್ನು ನಡೆಸಬೇಕು. ಅಂತರಾಷ್ಟ್ರೀಯ ತುಳು ಒಕ್ಕೂಟ ಇದಕ್ಕೆ ಸಹಕಾರ ನೀಡಲಿದೆ   ಎಂದು ತಿಳಿಸಿದರು.

ಸಾಹಿತಿ ಪ್ರೊ.ಮುರಳಿಧರ ಉಪಾಧ್ಯ ಪುಸ್ತಕ ಪರಿಚಯ ಮಾಡಿದರು. ಸಂತ ಸಿಸಿಲಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಸಿಸ್ಟರ್ ರಚನಾ ಎ.ಸಿ., ಮುಂಬಯಿ ಉಪನ್ಯಾಸಕಿ ಹರಿಣಾಕ್ಷಿ ಲಲಿತ್‌ರಾಜ್ ಸುವರ್ಣ, ಕ್ಷಿಪ್ರ ಪ್ರಸಾದ, ಪದ್ಮ ಪ್ರಸಾದ ಉಪಸ್ಥಿತರಿದ್ದರು.

ಲೇಖಕಿ, ಸಹಿತಿ ವಾಸಂತಿ ಅಂಬಲಪಾಡಿ ಸ್ವಾಗತಿಸಿದರು. ಶಿಕ್ಷಕಿ, ಸಾಹಿತಿ ಅಮೃತಾ ಸಂದೀಪ್ ಕಾರ್ಯಕ್ರಮ ನಿರೂಪಿಸಿದರು. ಸಾಹಿತಿ ಪೂರ್ಣಿಮ ಶೆಟ್ಟಿ ವಂದಿಸಿದರು.

Similar News