ಜಪಾನ್ ಗೆ ಅಪ್ಪಳಿಸಿದ ಚಂಡಮಾರುತ ಓರ್ವ ವ್ಯಕ್ತಿ ಮೃತ್ಯು; ಜನಜೀವನ ಅಸ್ತವ್ಯಸ್ತ

Update: 2023-06-03 17:58 GMT

ಟೋಕಿಯೊ: ಜಪಾನ್ ಗೆ ಅಪ್ಪಳಿಸಿರುವ ಮವಾರ್ ಚಂಡಮಾರುತವು ವ್ಯಾಪಕ ನಾಶ-ನಷ್ಟ ಉಂಟುಮಾಡಿದ್ದು ಭಾರೀ ಮಳೆಯಿಂದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ. ಹಲವೆಡೆ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದ್ದು ರೈಲು ಸೇವೆಗಳನ್ನು ರದ್ದುಮಾಡಿರುವುದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ ಎಂದು ಜಪಾನ್ ಹವಾಮಾನ ಸಂಸ್ಥೆ ಹೇಳಿದೆ.

ದೇಶದ ಪೂರ್ವಭಾಗದಲ್ಲಿ ಭಾರೀ ಮಳೆಯಿಂದಾಗಿ ನದಿಗಳಲ್ಲಿ ನೀರಿನ ಮಟ್ಟ ಏರುತ್ತಿದ್ದು ಅಪಾಯದ ಮಟ್ಟದ ಸನಿಹದಲ್ಲಿದೆ ಪಶ್ಚಿಮ ಜಪಾನ್ ನಲ್ಲಿ ಭೂಕುಸಿತ ಸಂಭವಿಸುವ ಸಾಧ್ಯತೆಯಿದ್ದು ಜನತೆ ಮುನ್ನೆಚ್ಚರಿಕೆ ವಹಿಸುವಂತೆ  ಅಧಿಕಾರಿಗಳು ಎಚ್ಚರಿಸಿದ್ದಾರೆ. ಹಲವು ವಿಮಾನಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ ಎಂದು ರಾಯ್ಟರ್ಸ್ ವರದಿ ಮಾಡಿದೆ.

ಪೂರ್ವ ಮತ್ತು ಪಶ್ಚಿಮ ಜಪಾನ್ನಲ್ಲಿನ ಸುಮಾರು 7,000 ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು ಟೋಕಿಯೋದಿಂದ ಮಧ್ಯ ಜಪಾನ್ ನ ನಗೋಯಾಕ್ಕೆ ಬುಲೆಟ್ ರೈಲು ಸಂಚಾರ ರದ್ದುಗೊಂಡಿದೆ. 10 ಲಕ್ಷ ಜನರನ್ನು ಸ್ಥಳಾಂತರಿಸುವ ಅಗತ್ಯವಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Similar News