ವಿದ್ಯಾಪೋಷಕ್‌ನ ಪದವಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಶಿಬಿರ

Update: 2023-06-04 14:01 GMT

ಉಡುಪಿ, ಜೂ.4: ವಿದ್ಯಾಪೋಷಕ್‌ನ ಪದವಿ ವಿದ್ಯಾರ್ಥಿಗಳಿಗೆ ಒಂದು ದಿನದ ಶೈಕ್ಷಣಿಕ ಸಮಾಲೋಚನ ಶಿಬಿರವು ಅಂಬಲಪಾಡಿ ದೇವಳದ ಭವಾನಿ ಮಂಟಪದಲ್ಲಿ ರವಿವಾರ ಜರಗಿತು.

ಶಿಬಿರವನ್ನು ದೇವಳದ ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ್  ಉದ್ಘಾಟಿಸಿ ಶುಭಹಾರೈಸಿದರು. ವಿದ್ಯಾ ಪೋಷಕ್ ಫಲಾನುಭಾವಿ ವಿದ್ಯಾರ್ಥಿನಿ, ಪೂರ್ಣಪ್ರಜ್ಞಾ ಕಾಲೇಜಿನ ಉಪನ್ಯಾಸಕಿ ಸುಪರ್ಣಾ ವಿದ್ಯಾಪೋಷಕ್ ಸಹಕಾರ ದಿಂದ ತಾನು ಮಾಡಿದ ಸಾಧನೆಯನ್ನು ಹಂಚಿಕೊಂಡರು.

ಸಿಎ ಮಾಡುತ್ತಿರುವ ವಿದ್ಯಾಪೋಷಕ್ ವಿದ್ಯಾರ್ಥಿನಿ ಕವನಾ ಸಿಎ ಕಲಿಕೆಯ ಕುರಿತು ತನ್ನ ಅನುಭವವನ್ನು ಹಂಚಿ ಕೊಂಡರು. ಈ ಸಂದರ್ಭದಲ್ಲಿ ಉದ್ಯಮಿ ರವಿ ಭಟ್ ದಂಪತಿಯನ್ನು ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ ರಾವ್  ಗೌರವಿಸಿದರು. ಹುಬ್ಬಳ್ಳಿಯ ಮೈಲೈಫ್‌ನ ಸ್ಥಾಪಕ ಪ್ರವೀಣ್ ಗುಡಿ, ಸಿಎ ಪ್ರದೀಪ್ ಜೋಗಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.

ದಾನಿಗಳಾದ ವಿಲಾಸಿನಿ ಬಿ.ಶೆಣೈ, ಪ್ರಮೀಳ ಐತಾಳ್, ತಾರಾದೇವಿ, ಉಪಾಧ್ಯಕ್ಷ ಎಸ್.ವಿ.ಭಟ್, ಜತೆ ಕಾರ್ಯ ದರ್ಶಿಗಳಾದ ನಾರಾಯಣ ಎಂ. ಹೆಗಡೆ, ಎಚ್.ಎನ್.ಶೃಂಗೇಶ್ವರ, ಸದಸ್ಯರಾದ ಸಂತೋಷ್ ಕುಮಾರ್ ಶೆಟ್ಟಿ, ರಾಜೀವಿ, ಗಣೇಶ್ ರಾವ್ ಎಲ್ಲೂರು, ಅಶೋಕ್, ಮಂಜುನಾಥ ಉಪಸ್ಥಿತರಿದ್ದರು. ಕಾರ್ಯದರ್ಶಿ ಮುರಲಿ ಕಡೆ ಕಾರ್ ಕಾರ್ಯಕ್ರಮ ನಿರೂಪಿಸಿದರು. ಒಟ್ಟು 230 ವಿದ್ಯಾರ್ಥಿಗಳು ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು. 

Similar News