1991 ರ ಕೊಲೆ ಪ್ರಕರಣ: ಗ್ಯಾಂಗ್ ಸ್ಟರ್-ರಾಜಕಾರಣಿ ಮುಖ್ತಾರ್ ಅನ್ಸಾರಿ ದೋಷಿ ಎಂದ ಉತ್ತರಪ್ರದೇಶ ನ್ಯಾಯಾಲಯ

Update: 2023-06-05 07:59 GMT

ಲಕ್ನೊ: 1991 ರ ಕಾಂಗ್ರೆಸ್ ಕಾರ್ಯಕರ್ತನ ಹತ್ಯೆ ಪ್ರಕರಣದಲ್ಲಿ   ಗ್ಯಾಂಗ್ ಸ್ಟರ್ -ರಾಜಕಾರಣಿ ಮುಖ್ತಾರ್ ಅನ್ಸಾರಿಯನ್ನು ತಪ್ಪಿತಸ್ಥ ಎಂದು ಉತ್ತರ ಪ್ರದೇಶದ ವಾರಣಾಸಿಯ ನ್ಯಾಯಾಲಯವು ಸೋಮವಾರ ತೀರ್ಪು ನೀಡಿದೆ.

ವಾರಣಾಸಿ ಎಂಪಿ ಎಂಎಲ್ಎ ನ್ಯಾಯಾಲಯವು ಮೇ 19 ರಂದು ವಾದ-ಪ್ರತಿವಾದಗಳನ್ನು ಆಲಿಸಿದ  ನಂತರ ವಿಚಾರಣೆಯನ್ನು ಮುಕ್ತಾಯಗೊಳಿಸಿತು, ತನ್ನ ಆದೇಶವನ್ನು ಕಾಯ್ದಿರಿಸಿತು. ಆದೇಶವನ್ನು ನೀಡಲು ಜೂನ್ 5 ರಂದು ದಿನಾಂಕವನ್ನು ನಿಗದಿಪಡಿಸಿತು.

ಆಗಸ್ಟ್ 3, 1991 ರಂದು, ಕಾಂಗ್ರೆಸ್ ನಾಯಕ ಹಾಗೂ  ಮಾಜಿ ಶಾಸಕ ಅಜಯ್ ರೈ ಅವರ ಸಹೋದರ ಅವಧೇಶ್ ರೈ ಅವರನ್ನು ವಾರಣಾಸಿಯಲ್ಲಿ ಅಜಯ್ ಅವರ ಮನೆಯ ಹೊರಗೆ ಗುಂಡಿಕ್ಕಿ ಕೊಲ್ಲಲಾಯಿತು.ಅಪರಾಧ ಎಸಗಿದಾಗ   ಅನ್ಸಾರಿ  ಶಾಸಕನಾಗಿರಲಿಲ್ಲ

 ಉತ್ತರ ಪ್ರದೇಶದ ಮೌ ಕ್ಷೇತ್ರದಿಂದ ಐದು ಅವಧಿಗೆ ಶಾಸಕನಾಗಿರುವ ಮುಖ್ತಾರ್ ಅನ್ಸಾರಿ ಈಗಾಗಲೇ ಮತ್ತೊಂದು ಅಪಹರಣ ಹಾಗೂ  ಕೊಲೆ ಪ್ರಕರಣದಲ್ಲಿ 10 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾನೆ. ಎಪ್ರಿಲ್‌ನಲ್ಲಿ ಆತನಿಗೆ ಶಿಕ್ಷೆ ವಿಧಿಸಲಾಯಿತು.

Similar News