ಜೂ.8: ಉಡುಪಿ ಜಿಲ್ಲೆಯ ವಿವಿದೆಡೆ ವಿದ್ಯುತ್ ನಿಲುಗಡೆ

Update: 2023-06-05 14:34 GMT

ಉಡುಪಿ, ಜೂ.5: ಜೂನ್ 8ರಂದು ಬೆಳಗ್ಗೆ 9ರಿಂದ ಸಂಜೆ 5:30 ರವರೆಗೆೆಗೆ 110/33/11 ಕೆವಿ ಮಣಿಪಾಲ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆಎಂಎಫ್ ಫೀಡರಿನಲ್ಲಿ ನಿರ್ವಹಣೆ ಕಾಮಗಾರಿ ಹಮ್ಮಿ ಕೊಂಡಿರುವು ದರಿಂದ ಈಶ್ವರನಗರ, ಸರಳೆಬೆಟ್ಟು, ಅರ್ಬಿ,ಪ್ರಗತಿನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

33/11 ಕೆವಿ  ಕುಂಜಿಬೆಟ್ಟು ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆವಿ  ಉಡುಪಿ-3 ಫೀಡರ್ ಮಾರ್ಗದಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಉಡುಪಿ ನಗರ ಪ್ರದೇಶಗಳಾದ ಪಿಪಿಸಿ ಕಾಲೇಜು, ಫೀಶ್ ಮಾರ್ಕೆಟ್ ರೋಡ್, ಕೋರ್ಟ್ ರಸ್ತೆ, ಮಾರುತಿ ವಿಥೀಕಾ, ಪಿಡಬ್ಲ್ಯೂಡಿ ಆಫೀಸ್ ರಸ್ತೆ, ತೆಂಕಪೇಟೆ, ಕೆ.ಎಂ. ಮಾರ್ಗ, ಕನಕದಾಸ ರಸ್ತೆ ಮತ್ತುಸುತ್ತಮುತ್ತಲಿನ ಪ್ರದೇಶಗಳ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

33/11 ಕೆವಿ ಜಿಐಎಸ್ ಕೋಟ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆವಿ  ಸಾಲಿಗ್ರಾಮ ಫೀಡರ್‌ನ ಮಾರ್ಗದಲ್ಲಿ ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಸಾಲಿಗ್ರಾಮ ಪೇಟೆ, ಪಾರಂಪಳ್ಳಿ, ಚೆಂಪಿ ಮತ್ತು ಕಾರ್ಕಡ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಜೂನ್ 9ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ 110 ಕೆವಿ  ಕಾರ್ಕಳ ವಿದ್ಯುತ್ ಉಪಕೇಂದ್ರ ದಿಂದ ಹೊರಡುವ 11ಕೆವಿ  ಬೈಲೂರು ಎಕ್ಸ್‌ಪ್ರೆಸ್, ಕೆಹೆಚ್‌ಬಿ ಪದವು ಮತ್ತು ನಕ್ರೆ ಫೀಡರ್‌ಗಳ ಲೈನ್ ಶಿಪ್ಟಿಂಗ್ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಬೈಲೂರು, ಜಾರ್ಕಳ, ನೀರೆ, ಎರ್ಲಪಾಡಿ, ಕೌಡೂರು, ಪರಪು, ಗುಂಡ್ಯಡ್ಕ, ಬೋರ್ಗಲ್‌ಗುಡ್ಡೆ, ಕುಂಟಾಡಿ, ಪಳ್ಳಿ, ಆನಂದಿ ಮೈದಾನ, ನಕ್ರೆ, ಪೊಸನೊಟ್ಟು, ಕೆ.ಹೆಚ್.ಬಿ. ಕಾಲನಿ, ಜೋಡುರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.

Similar News