ರಶ್ಯ ರೇಡಿಯೋ ಸ್ಟೇಷನ್ ಹ್ಯಾಕ್: ವರದಿ

Update: 2023-06-05 17:52 GMT

ಮಾಸ್ಕೋ: ರಶ್ಯದ ಹಲವು ರೇಡಿಯೊ ಸ್ಟೇಷನ್‌ಗಳನ್ನು ಹ್ಯಾಕ್ ಮಾಡಲಾಗಿದ್ದು ಅಧ್ಯಕ್ಷರ ಹೇಳಿಕೆ ಎಂಬ ನಕಲಿ ಸಂದೇಶಗಳನ್ನು ಪ್ರಸಾರ ಮಾಡಲಾಗುತ್ತಿದೆ ಎಂದು ರಶ್ಯ ಅಧ್ಯಕ್ಷರ ಕಚೇರಿ ಸೋಮವಾರ ಹೇಳಿದೆ.

ರಶ್ಯದ ಗಡಿಭಾಗದಲ್ಲಿ ಒಳನುಸುಳುವ ಪ್ರಯತ್ನ ಹಾಗೂ ಶೆಲ್ದಾಳಿ ತೀವ್ರಗೊಂಡಿರುವ ಸಂದರ್ಭದಲ್ಲೇ ರೇಡಿಯೊ ಸ್ಟೇಷನ್‌ಗಳನ್ನು ಹ್ಯಾಕ್ ಮಾಡಲಾಗಿದೆ. ‘ಉಕ್ರೇನ್ ನ ಪಡೆಗಳು ರಶ್ಯದ ಮೇಲೆ ದಂಡೆತ್ತಿ ಬರುತ್ತಿದ್ದು ಉಕ್ರೇನ್ ನ ಗಡಿಗೆ ಹೊಂದಿಕೊಂಡಿರುವ ಮೂರು ಪ್ರಾಂತಗಳಲ್ಲಿ ತುರ್ತು ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ಪುಟಿನ್ ಹೇಳಿರುವುದಾಗಿ ನಕಲಿ ಸಂದೇಶ ಪ್ರಸಾರ ಮಾಡಲಾಗುತ್ತಿದೆ ಎಂದು ವರದಿಯಾಗಿದೆ.

‘ನೇಟೊದ ಶಸ್ತ್ರಾಸ್ತ್ರ, ಅಮೆರಿಕದ ಸಮ್ಮತಿ ಮತ್ತು ಸಹಾಯದಿಂದ ಉಕ್ರೇನ್ ಸೇನೆಯು ಕರ್ಸ್ಕ್, ಬೆಲ್ಗೊರೋಡ್ ಮತ್ತು ಬ್ರಯಾಂಸ್ಕ್ ಪ್ರಾಂತಗಳ ಮೇಲೆ ದಂಡೆತ್ತಿಬಂದಿವೆ. ಈ ಮೂರು ಪ್ರಾಂತಗಳಲ್ಲಿ ಸೇನಾ ಕಾನೂನು ಜಾರಿಗೊಳಿಸಿದ್ದು ನಾಗರಿಕರನ್ನು ತೆರವುಗೊಳಿಸಲಾಗುತ್ತಿದೆ’ ಎಂಬ ಸಂದೇಶವು ಪುಟಿನ್ ಅವರ ಧ್ವನಿಯನ್ನು ಹೋಲುವ ಸ್ವರದಲ್ಲೇ ಪ್ರಸಾರವಾಗುತ್ತಿದೆ. 

ಈ ನಕಲಿ ಸಂದೇಶಗಳು ಸಾಮಾಜಿಕ ಮಾಧ್ಯಮದಲ್ಲೂ ಹರಿದಾಡುತ್ತಿದೆ ಎಂದು ವರದಿ ಹೇಳಿದೆ.

Similar News