ಪ್ಯಾರಿಸ್ ನಲ್ಲಿ ದುಷ್ಕರ್ಮಿಯಿಂದ ಚೂರಿ ದಾಳಿ: ಆರು ಮಕ್ಕಳು ಸೇರಿದಂತೆ 7 ಮಂದಿಗೆ ಗಾಯ;ಮೂವರ ಸ್ಥಿತಿ ಗಂಭೀರ

Update: 2023-06-08 09:33 GMT

ಪ್ಯಾರಿಸ್: ಫ್ರೆಂಚ್ ಆಲ್ಪ್ಸ್‌ನ ಅನ್ನೆಸಿ ಪಟ್ಟಣದಲ್ಲಿ ಗುರುವಾರ ದುಷ್ಕರ್ಮಿಯೊಬ್ಬ ನಡೆಸಿರುವ ಚೂರಿ ದಾಳಿಯಲ್ಲಿ ಆರು ಮಕ್ಕಳು ಸೇರಿದಂತೆ ಏಳು ಜನರು ಗಾಯಗೊಂಡಿದ್ದಾರೆ ಎಂದು ಭದ್ರತಾ ಮೂಲಗಳು ಎಎಫ್‌ಪಿಗೆ ತಿಳಿಸಿವೆ.

ಪಟ್ಟಣದ ಸರೋವರದ ಬಳಿಯ ಉದ್ಯಾನವನದಲ್ಲಿ ಬೆಳಿಗ್ಗೆ 9:45 ರ ಸುಮಾರಿಗೆ ಆಟವಾಡುತ್ತಿದ್ದ ಸುಮಾರು ಮೂರು ವರ್ಷ ವಯಸ್ಸಿನ ಮಕ್ಕಳ ಗುಂಪಿನ ಮೇಲೆ ಚಾಕುವಿನಿಂದ ವ್ಯಕ್ತಿಯೊಬ್ಬ ದಾಳಿ ಮಾಡಿದ್ದಾನೆ ಎಂದು ಸ್ಥಳೀಯ ಅಧಿಕಾರಿ AFP ಗೆ ತಿಳಿಸಿದ್ದಾರೆ.

ಭದ್ರತಾ ಪಡೆಗಳ ಕ್ಷಿಪ್ರ ಕಾರ್ಯಾಚರಣೆಯಿಂದಾಗಿ ದುಷ್ಕರ್ಮಿಯನ್ನು ಬಂಧಿಸಲಾಗಿದೆ ಎಂದು ಆಂತರಿಕ ಸಚಿವ ಜೆರಾಲ್ಡ್ ಡರ್ಮನಿನ್ ಟ್ವೀಟ್ ಮಾಡಿದ್ದಾರೆ.

ಚೂರಿ ದಾಳಿಗೆ ಒಳಗಾದ  ಕನಿಷ್ಠ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ಭದ್ರತಾ ಮೂಲಗಳು ಎಎಫ್‌ಪಿಗೆ ತಿಳಿಸಿವೆ.

Similar News