×
Ad

ಕುಂದಾಪುರ: ಅಧಿಕಾರಿಗಳ ಭರವಸೆ; ಕೊರಗರ ಧರಣಿ ಸತ್ಯಾಗ್ರಹ ಅಂತ್ಯ

Update: 2023-06-14 20:25 IST

ಕುಂದಾಪುರ: ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ನೇತೃತ್ವದಲ್ಲಿ ಕೊರಗರ ಭೂಮಿ ಸಮಸ್ಯೆ ಹಾಗೂ ವಿವಿಧ ಬೇಡಿಕೆ ಸಂಬಂಧಪಟ್ಟಂತೆ ನಾಡ ಗ್ರಾಪಂ ಎದುರು ನಡೆಸುತ್ತಿರುವ ಧರಣಿ ಸತ್ಯಾಗ್ರಹವನ್ನು ಅಧಿಕಾರಿಗಳ ಭರವಸೆ ಹಿನ್ನೆಲೆಯಲ್ಲಿ ಇಂದು ಸಂಜೆ ವೇಳೆ ಅಂತ್ಯಗೊಳಿಸಲಾಗಿದೆ. 

ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತರ ಸೂಚನೆಯಂತೆ ಸ್ಥಳಕ್ಕೆ ಆಗಮಿಸಿದ ಕುದಾಪುರ ತಹಶೀಲ್ದಾರ್ ಶೋಭಾಲಕ್ಷ್ಮೀ, ಧರಣಿ ನಿರತರಿಗೆ ತಿಳುವಳಿಕೆ ಪತ್ರವನ್ನು ನೀಡಿದರು. ಕೊರಗರ ವಿವಿಧ ಬೇಡಿಕೆ ಗಳ ಪರಿಹಾರಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಜು.5ರಂದು ಬೆಳಗ್ಗೆ 11ಗಂಟೆಗೆ ಸಭೆ ನಡೆಸಲು ದಿನಾಂಕ ನಿಗದಿ ಪಡಿಸಿ ಈ ಮೂಲಕ ಸಮುದಾಯದ ಮುಖಂಡರಿಗೆ ಸೂಚಿಸಲಾ ಗಿದೆ. ಆ ಮೂಲಕ ಮುಷ್ಕರವನ್ನು ಕೈಬಿಡುವಂತೆ ಕೋರಿದೆ ಎಂದು ತಿಳುವಳಿಕೆ ಪತ್ರದಲ್ಲಿ ನಮೂದಿಸಲಾಗಿತ್ತು.

ಬಳಿಕ ಅಧಿಕಾರಿಗಳು ಮುಖಂಡರ ಮನವೊಲಿಸಿ ಮುಷ್ಕರ ಕೈಬಿಡುವಂತೆ ಮನವಿ ಮಾಡಿದರು. ಅದರಂತೆ ಕೊರಗ ಸಂಘಟನೆಗಳ ಮುಖಂಡರು ಧರಣಿ ಯನ್ನು ಸಂಜೆ ವೇಳೆ ವಾಪಾಸ್ಸು ಪಡೆದುಕೊಂಡರು.

Similar News