ಮಟ್ಕಾ ದಂಧೆ: ಏಳು ಮಂದಿ ವಶಕ್ಕೆ
ಕುಂದಾಪುರ, ಜೂ.14: ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜೂ.13 ರಂದು ಮಟ್ಕಾ ದಂಧೆಗೆ ದಾಳಿ ನಡೆಸಿದ ಪೊಲೀಸರು ಒಟ್ಟು ಏಳು ಮಂದಿಯನ್ನು ವಶಕ್ಕೆ ಪಡೆದುಕೊಂಡಿರುವ ಬಗ್ಗೆ ವರದಿಯಾಗಿದೆ.
ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯ ಹಾಲಾಡಿ ಮಾರ್ಕೇಟ್ ಬಳಿ ಕೆದೂರು ಬೆಳಗೋಡು ನಿವಾಸಿ ವಿಜಯ ಕುಮಾರ್(43) ಮತ್ತು ವಂಡಾರು ಗ್ರಾಮದ ಮಾವಿನಕಟ್ಟೆ ಬಸ್ಸು ನಿಲ್ದಾಣದ ಬಳಿ ಮೊಗೆಬೆಟ್ಟುವಿನ ಕಾರ್ತಿಕ (24), ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕುಂದಾಪುರ ಮೀನು ಮಾರ್ಕೆಟ್ ಬಳಿ ಫೆರಿ ರಸ್ತೆಯ ಸುಕೇಶ್ ಆಚಾರಿ(32), ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ಸಮೀಪ ಹಾಲ್ಕಲ್‌ನ ರಾಜೇಶ್ ಕುಮಾರ್(34), ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಬೈಂದೂರು ವೆಸ್ಟ್‌ಕೋಸ್ಟ್ ವೈನ್ ಶಾಪ್ ಬಳಿ ಬಾಡಾ ನಿವಾಸಿ ನಾರಾಯಣ(39), ಬೈಂದೂರು ಮೀನು ಮಾರ್ಕೇಟ್ ಬಳಿ ಸೂರ್ಕಂದದ ಭಾಸ್ಕರ ಶೆಟ್ಟಿ(54) ಮತ್ತು ಕಿರಿಮಂಜೇಶ್ವರ ಗ್ರಾಮದ ಅರೆಹೊಳೆ ಬೈಪಾಸ್ ರಿಕ್ಷಾ ನಿಲ್ದಾಣದ ಬಳಿ ಬಡಾಕೆರೆಯ ಶ್ರೀನಿವಾಸ ದೇವಾಡಿಗ (57) ಎಂಬವರನ್ನು ನಗದು ಸಹಿತ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.