×
Ad

ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ 60 ವರ್ಷದ ಅರ್ಚಕನ ಬಂಧನ

Update: 2023-06-15 14:10 IST

ಪಾಟ್ನಾ: ಪಾಟ್ನಾದ ಕದಂಕೌನ್‌ ಪ್ರದೇಶದಲ್ಲಿ  ಏಳು ವರ್ಷದ ಬಾಲಕಿಯೊಬ್ಬಳ ಮೇಲೆ 60 ವರ್ಷದ ಅರ್ಚಕ ಅತ್ಯಾಚಾರವೆಸಗಿದ ಘಟನೆ ವರದಿಯಾಗಿದೆ. ಅರ್ಚಕ ಲುಟು ಬಾಬಾ ಎಂಬಾತನನ್ನು ಬಂಧಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ಸೋಮವಾರ ಬಾಲಕಿಗೆ ಗೊಂಬೆ ಕೊಡಿಸುವ ಆಮಿಷವೊಡ್ಡಿ ದೇವಸ್ಥಾನದ ಪಕ್ಕದ ಕೊಠಡಿಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆಂದು ಆರೋಪಿಸಲಾಗಿದೆ. ಬಾಲಕಿ ಜೋರಾಗಿ ಕಿರುಚಿದಾಗ ಜನರು ಸೇರಿ ಆತನನ್ನು ಹಿಡಿದು ಥಳಿಸಿ ನಂತರ ಪೊಲೀಸರಿಗೆ ಒಪ್ಪಿಸಲಾಗಿದೆ.

ಆರೋಪಿ ಈ ಹಿಂದೆ ಕೂಡ ಬಾಲಕಿಯ ಜೊತೆಗೆ ಅನುಚಿತವಾಗಿ ವರ್ತಿಸಿದ್ದನೆಂದು ಆರೋಪಿಸಲಾಗಿದೆ.

Similar News