×
Ad

ಗುಜರಾತ್ : ಪ್ರವಾಹಕ್ಕೆ ಸಿಲುಕಿದ್ದ ಮೇಕೆಗಳನ್ನು ರಕ್ಷಿಸಲು ಹೋಗಿ ನೀರು ಪಾಲಾದ ತಂದೆ-ಮಗ

Update: 2023-06-16 11:20 IST

ಭಾವನಗರ: ಬಿಪರ್‌ಜೋಯ್ ಚಂಡಮಾರುತದಿಂದಾಗಿ  ಗುಜರಾತ್‌ನ ಹಲವೆಡೆ ಭಾರಿ ಮಳೆ ಸುರಿದಿದ್ದು ಗುರುವಾರ ಭಾವನಗರ ಜಿಲ್ಲೆಯಲ್ಲಿ ಪ್ರವಾಹಕ್ಕೆ ಸಿಲುಕಿದ ಮೇಕೆಗಳನ್ನು ರಕ್ಷಿಸುವ ಪ್ರಯತ್ನದಲ್ಲಿ ತಂದೆ ಹಾಗೂ  ಮಗ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.

ಚಂಡಮಾರುತದಿಂದ ಕಚ್ ಜಿಲ್ಲೆಯಲ್ಲಿ ಭೂಕುಸಿತ  ಉಂಟಾಗಿದ್ದರಿಂದ ಭಾವನಗರ ಸೇರಿದಂತೆ ಗುಜರಾತ್‌ನ ಹಲವು ಭಾಗಗಳಲ್ಲಿ ಗುರುವಾರ ಸಾಕಷ್ಟು ಮಳೆಯಾಗಿದೆ.

ಬೆಳಿಗ್ಗೆಯಿಂದ ಮಳೆ ಸುರಿದ ನಂತರ, ಸಿಹೋರ್ ಪಟ್ಟಣದ ಬಳಿಯ ಭಂಡಾರ್ ಗ್ರಾಮದ ಮೂಲಕ ಹಾದುಹೋಗುವ ಕಮರಿಯಲ್ಲಿ ನೀರು ಹರಿಯಲು ಆರಂಭಿಸಿತು ಎಂದು ಮಮ್ಲತಾರ್ (ಕಂದಾಯ ಅಧಿಕಾರಿ) ಎಸ್ .ಎನ್. ವಾಲಾ ಹೇಳಿದರು.

ಏಕಾಏಕಿ ನೀರು ಹರಿದು ಬಂದಿದ್ದರಿಂದ ಆಡುಗಳ ಹಿಂಡು ಕಮರಿಯಲ್ಲಿ ಸಿಲುಕಿಕೊಂಡಿವೆ. ಪ್ರಾಣಿಗಳನ್ನು ರಕ್ಷಿಸಲು ಮುಂದಾದ  55 ವರ್ಷದ ರಾಮ್‌ಜಿ ಪರ್ಮಾರ್  ಹಾಗೂ  ಅವರ ಮಗ ರಾಕೇಶ್ ಪರ್ಮಾರ್ (22) ಕಂದರವನ್ನು ಪ್ರವೇಶಿಸಿದರು. ಆದಾಗ್ಯೂ, ಅವರು ನೀರಿನಲ್ಲಿ ಕೊಚ್ಚಿಹೋದರು. ಅವರಮೃತ ದೇಹಗಳನ್ನು ಸ್ವಲ್ಪ ದೂರದಲ್ಲಿ ಪತ್ತೆ ಹಚ್ಚಲಾಯಿತು. 22 ಮೇಕೆಗಳು  ಹಾಗೂ ಒಂದು ಕುರಿ ಕೂಡ ಸಾವನ್ನಪ್ಪಿವೆ  ”ಎಂದು  ವಾಲಾ ಹೇಳಿದರು.

ಉಳಿದಂತೆ ರಾಜ್ಯದಲ್ಲಿ ಚಂಡಮಾರುತದಿಂದ ಯಾವುದೇ ಸಾವು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೆಚ್ಚು ಹಾನಿಗೊಳಗಾದ ಪ್ರದೇಶವಾದ ಕಚ್ ಜಿಲ್ಲೆಯಲ್ಲಿ ಯಾವುದೇ ಸಾವು ಸಂಭವಿಸಿಲ್ಲ ಎಂದು ಕಲೆಕ್ಟರ್ ಅಮಿತ್ ಅರೋರಾ ಹೇಳಿದ್ದಾರೆ.

Similar News