×
Ad

ಗಾಳಿಮಳೆ: ಹಲವು ಮನೆಗಳಿಗೆ ಹಾನಿ

Update: 2023-06-16 20:44 IST

ಉಡುಪಿ, ಜೂ.16: ಜಿಲ್ಲೆಯಾದ್ಯಂತ ಸುರಿದ ಮಳೆಗಾಳಿಯಿಂದ ಹಲವು ಮನೆಗಳಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.

ಕಳೆದ 24ಗಂಟೆಗಳ ಅವಧಿಯಲ್ಲಿ ಉಡುಪಿ- 4.8ಮಿ.ಮೀ., ಬ್ರಹ್ಮಾವರ- 7.0ಮಿ.ಮೀ., ಕಾಪು- 8.7ಮಿ.ಮೀ., ಕುಂದಾಪುರ- 6.4ಮಿ.ಮೀ., ಬೈಂದೂರು-3.0ಮಿ.ಮೀ., ಕಾರ್ಕಳ- 4.5ಮಿ.ಮೀ., ಹೆಬ್ರಿ- 7.8ಮಿ.ಮೀ. ಮಳೆಯಾಗಿದ್ದು, ಜಿಲ್ಲೆಯಲ್ಲಿ ಸರಾಸರಿ 5.7ಮಿ.ಮೀ. ಮಳೆಯಾಗಿರುವ ಬಗ್ಗೆ ವರದಿಯಾಗಿದೆ.

ಮಳೆಗಾಳಿಯಿಂದ ಗಂಗೊಳ್ಳಿಯ ಲಕ್ಷ್ಮೀ ಎಂಬವರ ಮನೆಗೆ ಸಂಪೂರ್ಣ ಹಾನಿಯಾಗಿದ್ದು, 1.50ಲಕ್ಷ ರೂ. ಮತ್ತು ಮೊಳಹಳ್ಳಿಯ ವನಜ ಎಂಬವರ ಮನೆಗೆ ಹಾನಿಯಾಗಿ 35ಸಾವಿರ ರೂ. ನಷ್ಟವಾಗಿದೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.

Similar News