×
Ad

ಕೆನಡಾ: ಏರ್‌ ಇಂಡಿಯಾ ಬಾಂಬ್ ಪ್ರಕರಣದ ಆರೋಪಿಯ ವೈಭವೀಕರಿಸುವ ಪೋಸ್ಟರ್

Update: 2023-06-17 23:11 IST

ಒಟ್ಟಾವ: 1985ರಲ್ಲಿ ಏರ್‌ ಇಂಡಿಯಾದ ವಿಮಾನದಲ್ಲಿ ಬಾಂಬ್ ಇರಿಸಿದ ಪ್ರಕರಣದ ಸೂತ್ರಧಾರ ಎಂದು ಆರೋಪಿಸಲಾಗಿರುವ ತಲ್ವಿಂದರ್ ಪರ್ಮಾರ್ ರನ್ನು ವೈಭವೀಕರಿಸುವ ಪೋಸ್ಟರ್ ಗಳು ಕೆನಡಾದ ಹಲವು ಪ್ರದೇಶಗಳಲ್ಲಿ ಕಂಡುಬಂದಿದೆ ಎಂದು ವರದಿಯಾಗಿದೆ.

ಜೂನ್ 25ರಂದು ಖಾಲಿಸ್ತಾನ್ ಪರ ಸಂಘಟನೆಗಳು ಆಯೋಜಿಸಿರುವ ಕಾರು ರ್ಯಾಲಿಯ ಪ್ರಚಾರಾರ್ಥ ಕೆನಡಾದ ವಿವಿಧೆಡೆ ಅಂಟಿಸಿರುವ ಪೋಸ್ಟರ್ಗಳಲ್ಲಿ ತಲ್ವಿಂದರ್ ಸಿಂಗ್ ನ ಫೋಟೋ ಹಾಕಿ `ಶಹೀದ್ ಭಾಯಿ' ಎಂದು ವೈಭವೀಕರಿಸಲಾಗಿದೆ. ಜತೆಗೆ, 1985ರ ಏರ್ ಇಂಡಿಯಾ ಕನಿಷ್ಕ ವಿಮಾನ ಅಪಘಾತದಲ್ಲಿ ಭಾರತದ ಪಾತ್ರದ ಬಗ್ಗೆ ತನಿಖೆ ನಡೆಯಬೇಕು ಎಂದು ಆಗ್ರಹಿಸಲಾಗಿದೆ‌

Similar News