×
Ad

ಬಿಜೆಪಿಯವರು ಕಾಂಗ್ರೆಸ್​​ನ 55 ಶಾಸಕರನ್ನು ಟಾರ್ಗೆಟ್​ ಲಿಸ್ಟ್​ ಮಾಡಿದ್ದಾರೆ : ವಿಜಯಾನಂದ ಕಾಶಪ್ಪನವರ್

Update: 2025-07-13 17:37 IST

ಬಾಗಲಕೋಟೆ : ಬಿಜೆಪಿಯವರು ಕಾಂಗ್ರೆಸ್​​ನ 55 ಶಾಸಕರನ್ನು ಪಟ್ಟಿ ಮಾಡಿದ್ದಾರೆ. ಬಿಜೆಪಿ ಏಜೆಂಟ್​ಗಳನ್ನು ಅವರ ಮನೆಗೆ ಕಳುಹಿಸಿ ಹೆದರಿಸಿದ್ದಾರೆ ಎಂದು ಕಾಂಗ್ರೆಸ್‌ ಶಾಸಕ ವಿಜಯಾನಂದ ಕಾಶಪ್ಪನವರ್ ಆರೋಪಿಸಿದ್ದಾರೆ.

ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ ಬರದೇ ಹೋದರೆ ಸಿಬಿಐ, ಈಡಿ ದಾಳಿ ಮಾಡಿಸಿ ಅಕ್ರಮ ಆಸ್ತಿ ಹೊರಗೆ ತರುತ್ತೇವೆ ಎಂದು ಹೇಳುತ್ತಾರೆ. ಇದಕ್ಕೆಲ್ಲ ನಾವು ಬಗ್ಗಲ್ಲ, ಬಿಜೆಪಿಯವರ ಆ ಲಿಸ್ಟ್​​ನಲ್ಲಿ ನಾನು ಇದ್ದರೂ ಇರಬಹುದು ಎಂದು ಹೇಳಿದ್ದಾರೆ.

ಇತ್ತೀಚಿಗೆ ಬಳ್ಳಾರಿಯ ಕಾಂಗ್ರೆಸ್‌ ಶಾಸಕರ ಮನೆ ಮೇಲೆ ಅಧಿಕಾರಿಗಳು ದಾಳಿ ಮಾಡಿದರು. ಇದೆಲ್ಲ, ದ್ವೇಷದ ರಾಜಕಾರಣ. ಬಿಜೆಪಿಯವರಿಗೆ ಧೈರ್ಯ ಇದ್ದರೆ, ಜನರ ಮಧ್ಯೆ ಬರಲಿ ಎಂದು ಆಕ್ರೋಶ ಹೊರಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News