ಬಾಗಲಕೋಟೆ: ಬನಹಟ್ಟಿಯಲ್ಲೇ ಪ್ರಜಾ ಸೌಧ ನಿರ್ಮಾಣವಾಗಬೇಕು ಎಂದು ಒತ್ತಾಯಿಸಿ ನಡೆಯುತ್ತಿರುವ ಧರಣಿಯು 18ನೇ ದಿನಕ್ಕೆ ಕಾಲಿಟ್ಟಿದೆ.

ಬನಹಟ್ಟಿ ಪಟ್ಟಣದಲ್ಲಿ ತಾಲೂಕ ಕೇಂದ್ರ ಕಚೇರಿಯ ಕಟ್ಟಡಗಳು ನಿರ್ಮಾಣ ಆಗಬೇಕು. ತಾಲೂಕು ಕಚೇರಿಯ ನಿರ್ಮಾಣಕ್ಕೆ ಸರಕಾರ ಪ್ರಜಾ ಸೌಧ ನಿರ್ಮಾಣ ಮಾಡುತ್ತಿದೆ. ಆದರೆ ಬನಹಟ್ಟಿ ಬದಲು ರಬಕವಿ ಪಟ್ಟಣಕ್ಕೆ ಪ್ರಜಾಸೌಧ ನಿರ್ಮಾಣ ಮಾಡಲು ಮುಂದಾದ ಸರಕಾರದ ನಿರ್ಧಾರಕ್ಕೆ ಸ್ಥಳೀಯರಲ್ಲಿ ವಿರೋಧ ವ್ಯಕ್ತವಾಗಿದೆ. ಈ ಹಿನ್ನಲೆ ಬನಹಟ್ಟಿ ನಗರ ಅಭಿವೃದ್ಧಿ ಸಮಿತಿ ವತಿಯಿಂದ ಸ್ಥಳೀಯರು ಸತ್ಯಾಗ್ರಹ ಹೋರಾಟ ಹಮ್ಮಿಕೊಂಡಿದ್ದಾರೆ.

ಬನಹಟ್ಟಿ ನಗರದ ಸಿಟಿಎಸ್ ನಂಬರ್ 8822 ರಲ್ಲಿಯೇ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿ‌ ಪ್ರತಿಭಟನೆ ನಡೆಸುತ್ತಿದ್ದಾರೆ.

18ನೇ ದಿನದ ಪ್ರತಿಭಟನೆಗೆ ಬನಹಟ್ಟಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಕುರುಬ ಸಮಾಜದ ಮುಖಂಡರು ಹಾಗೂ ಸಮಾಜದ ನೂರಾರು ಮಂದಿ ಕುರಿಗಳೊಂದಿಗೆ ಆಗಮಿಸಿ ಬೆಂಬಲ ವ್ಯಕ್ತಪಡಿಸಿದರು.

ಪ್ರಜಾ ಸೌಧ ಬನಹಟ್ಟಿಯಲ್ಲೇ ನಿರ್ಮಾಣವಾಗಬೇಕು ಎಂಬ ಬೇಡಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಇಲ್ಲದಿದ್ದರೆ ಉಗ್ರ ಸ್ವರೂಪದ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿಜಯಾನಂದ ಕಾಶಪ್ಪನವರ ಸೇರಿದಂತೆ ಇತರ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. 

ಪ್ರತಿನಿತ್ಯ ಸರದಿ ಸತ್ಯಾಗ್ರಹ ಜೊತೆಗೆ, ಬನಹಟ್ಟಿ ನಗರದ ಬಂದ್ ಮಾಡಲಾಗಿ, ಪ್ರತಿಭಟನೆ ಮಾಡುವ ಜೊತೆಗೆ, ಮಹಿಳೆಯರು, ವಿದ್ಯಾರ್ಥಿಗಳು ಹಾಗೂ ವಿವಿಧ ಸಮಾಜದವರು, ಉದ್ಯೋಗಸ್ಥರು ಹಾಗೂ ನೇಕಾರರು ಪ್ರತಿಭಟನೆ ಭಾಗವಹಿಸಿ,ಸರಕಾರ ಗಮನ ಸೆಳೆಯುವಂತೆ ಮಾಡುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor