ಬಾಗಲಕೋಟೆ: ಬೈಕಿಗೆ ಢಿಕ್ಕಿಯಾಗಿ ಉರುಳಿಬಿದ್ದ ಬಸ್: ಬೈಕ್ ಸವಾರ ಮೃತ್ಯು
Update: 2026-08-19 12:16 IST
ಬಾಗಲಕೋಟೆ: ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಬೈಕಿಗೆ ಢಿಕ್ಕಿಯಾಗಿ ಉರುಳಿಬಿದ್ದ ಘಟನೆ ಬೀಳಗಿ ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 218ರಲ್ಲಿ ಸಂಭವಿಸಿದೆ. ಘಟನೆಯಲ್ಲಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದರೆ, ಬಸ್ ಪ್ರಯಾಣಿಕರಲ್ಲಿ ಕೆಲವರು ಗಾಯಗೊಂಡಿರುವುದಾಗಿ ವರದಿಯಾಗಿದೆ.
ಮೃತರನ್ನು ಅಮರಸಿದ್ದ ಕಾಂಬಳೆ (34) ಎಂದು ಗುರುತಿಸಲಾಗಿದೆ.
ಹೈದರಾಬಾದ್ ನಿಂದ ಗೋವಾ ಕಡೆಗೆ ಹೊರಟಿದ್ದ ಮಹಾರಾಷ್ಟ್ರದ ಪಾಸಿಂಗ್ ಇರುವ ಖಾಸಗಿ ಸ್ಲೀಪರ್ ಬಸ್ ಬೀಳಗಿ ಪಟ್ಟಣದ ಹೊರವಲಯದಲ್ಲಿ ಬೈಕಿಗೆ ಢಿಕ್ಕಿ ಹೊಡೆದಿದೆ.
ಸ್ಥಳಕ್ಕೆ ಆಗಮಿಸಿದ ಬೀಳಗಿ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.