×
Ad

ಬಾಗಲಕೋಟೆ: ಗ್ಯಾಸ್ ಸಿಲಿಂಡರ್‌ ಸ್ಪೋಟ;‌ ಹೊತ್ತಿ ಉರಿದ ಅಂಗಡಿ, ಹಲವರಿಗೆ ಗಾಯ

Update: 2025-08-29 10:14 IST

ಬಾಗಲಕೋಟೆ: ಮಿನಿ ಸಿಲಿಂಡರ್‌ಗಳು ಆಕಸ್ಮಿಕವಾಗಿ ಸ್ಪೋಟಗೊಂಡ ಪರಿಣಾಮ ಅಂಗಡಿಯೊಂದು ಹೊತ್ತಿ ಉರಿದಿದ್ದು, ಹಲವರು ಗಾಯಗೊಂಡ ಘಟನೆ ಬಾದಾಮಿ ಶಿವಾಜಿ ಸರ್ಕಲ್ ಬಳಿ ನಡೆದಿದೆ.

ಅಂಗಡಿ ಮಾಲೀಕ ದಾದಾಪೀರ್ ಜಮಾದಾರ್ ಹಾಗೂ ಬಾದಾಮಿಯ ಹೋಮ್‌ಗಾರ್ಡ್ ಗಳು ಸೇರಿ 3-4 ಮಂದಿ ಗಾಯಗೊಂಡಿದ್ದಾರೆ. ಬಾದಾಮಿ ಪಟ್ಟಣದಲ್ಲಿ ರಸಮಂಜರಿ ಕಾರ್ಯಕ್ರಮವಿದ್ದ ಹಿನ್ನೆಲೆಯಲ್ಲಿ ಬಂದೋಬಸ್ತ್ ಗೆ ಅಂತ ಹೊರಟಿದ್ದ ಹೋಮ್ ಗಾರ್ಡ್‌ಗಳು ಅಂಗಡಿಯಲ್ಲಿ ಬೆಂಕಿ ಕಂಡು ದಾದಾಪೀರ್ ಜೊತೆ ಬಂದು ಬೆಂಕಿ ನಂದಿಸಲು ಅಂಗಡಿ ಬಾಗಿಲು ತೆರೆದಾಗ ಹೊರಕ್ಕೆ ಚಿಮ್ಮಿದ ಬೆಂಕಿಯಿಂದ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಅಂಗಡಿಯಲ್ಲಿ ಸಂಗ್ರಹಿಸಿಟ್ಟಿದ್ದ 5 ಕೆಜಿಯ ನಾಲ್ಕು ಸಿಲಿಂಡರ್‌ಗಳು ಸ್ಫೋಟಗೊಂಡು ಅಂಗಡಿ ಸಂಪೂರ್ಣ ಬೆಂಕಿಗಾಹುತಿಯಾಗಿದೆ ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಬಾದಾಮಿಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಳಕ್ಕೆ ಬಾದಾಮಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

ಬಾದಾಮಿ ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸಿದರು.


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News