×
Ad

ಅಂಗಾಂಗ ಕಸಿ ಆಸ್ಪತ್ರೆಗಳ ನೋಂದಣಿ, ನವೀಕರಣಕ್ಕಾಗಿ ತಪಾಸಣಾ ಸಮಿತಿ ರಚನೆ

Update: 2025-08-25 23:42 IST

ಬೆಂಗಳೂರು, ಆ.25: ರಾಜ್ಯ ಸರಕಾರವು ಮಾನವ ಅಂಗಾಂಗಗಳ ಮತ್ತು ಅಂಗಾಂಶಗಳ ಕಸಿ ಕಾಯ್ದೆ- 1994ರ ಅನ್ವಯ ಅಂಗಾಂಗ ಕಸಿ ಆಸ್ಪತ್ರೆಗಳ ನೋಂದಣಿ ಮತ್ತು ನವೀಕರಣಕ್ಕಾಗಿ ತಪಾಸಣಾ ಸಮಿತಿಯ ರಚನೆ ಮಾಡಿ ಸೋಮವಾರ ಆದೇಶ ಹೊರಡಿಸಿದೆ.

ಸಂಬಂಧಿತ ಅಂಗಾಂಗ ವಿಷಯ ತಜ್ಞರು ಮತ್ತು ಬಿಎಂಸಿಆರ್‌ಐನ ನ್ಯಾಯವೈದ್ಯ ವಿಭಾಗದ ಮುಖ್ಯಸ್ಥರು ಸಮಿತಿಯ ಸದಸ್ಯರಾಗಿರುತ್ತಾರೆ. ಎಸ್‌ಒಟಿಟಿಒನ ಕಾರ್ಯಕ್ರಮ ಅಧಿಕಾರಿಯು ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.

ಅಂಗಾಂಗ ಕಸಿ ಕೇಂದ್ರ ನೋಂದಣಿಗೆ ಅರ್ಜಿ ಸಲ್ಲಿಸುವ ಆಸ್ಪತ್ರೆಗಳ ಸಮಗ್ರ ತಪಾಸಣೆ ನಡೆಸುವುದು. ನಿಗದಿತ ಮಾದರಿಗಳ ಪ್ರಕಾರ ಶಾಸನಬದ್ದ ಪರವಾನಿಗೆಗಳು ಮತ್ತು ದಾಖಲೆಗಳನ್ನು ಪರಿಶೀಲಿಸುವುದು. ಕಸಿ ತಂಡದ ಆರ್ಹತೆಗಳು ಮತ್ತು ಅನುಭವವನ್ನು ಮೌಲ್ಯಮಾಪನ ಮಾಡುವುದು. ಆಪರೇಷನ್ ಥಿಯೇಟರ್‌ಗಳು, ಶಸ್ತ್ರಚಿಕಿತ್ಸಾ ಉಪಕರಣಗಳು ಮತ್ತು ಐಸಿಯು ಸೌಲಭ್ಯಗಳು ಸೇರಿದಂತೆ ಆಸ್ಪತ್ರೆಯ ಮೂಲಸೌಕರ್ಯವನ್ನು ಮೌಲ್ಯಮಾಪನ ಮಾಡುವುದು ತಪಾಸಣಾ ಸಮಿತಿಯ ಜವಾಬ್ದಾರಿಯಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News