ಯಂತ್ರಗಳು ಮಾನವನ ಬುದ್ಧಿಮತ್ತೆಗೆ ಸಮವಲ್ಲ : ಪ್ರೊ.ಹರ್ಜಿಂದರ್ ಸಿಂಗ್ ಭಾಟಿಯಾ
ಬೆಂಗಳೂರು : ಒಂದು ಕಾಲದಲ್ಲಿ ನಾವು ಯಂತ್ರಗಳಿಗೆ ತರಬೇತಿ ನೀಡುತ್ತಿದ್ದೆವು. ಆದರೆ, ಇಂದು ಯಂತ್ರಗಳು ನಮಗೆ ಸ್ಪಂದಿಸುತ್ತಿವೆಯಾದರೂ, ಮಾನವ ಬುದ್ಧಿಮತ್ತೆಯ ಶ್ರೇಷ್ಠತೆಗೆ ಇದು ಎಂದಿಗೂ ಸಮನಾಗುವುದಿಲ್ಲ ಎಂದು ನಿವೃತ್ತ ವಿಜ್ಞಾನಿ ಪ್ರೊ.ಹರ್ಜಿಂದರ್ ಸಿಂಗ್ ಭಾಟಿಯಾ ತಿಳಿಸಿದ್ದಾರೆ.
ಸೆಂಟರ್ ಫಾರ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ಜೈನ್ ಡೀಮ್-ಟು-ಬಿ ವಿಶ್ವವಿದ್ಯಾಲಯದ ವತಿಯಿಂದ ‘ತಂತ್ರಜ್ಞಾನದ ಮುಂದುವರಿಕೆ’ ದಾರ್ಶನಿಕ ಪರಿಕಲ್ಪನೆಗಳನ್ನು ನೈಜ-ವಿಶ್ವಕ ಪರಿಹಾರಗಳನ್ನಾಗಿ ಪರಿವರ್ತಿಸುವುದುʼ ವಿಷಯದ ಕುರಿತ ರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಕುರುಡಾಗಿ ತಂತ್ರಜ್ಞಾನವನ್ನು ಅನುಸರಿಸುವ ಬದಲು, ಜವಾಬ್ದಾರಿಯುತವಾಗಿ ತಂತ್ರಜ್ಞಾನವನ್ನು ಬಳಸಬೇಕು. ರಕ್ಷಣಾವಲಯ ಮತ್ತು ಇತರ ಪ್ರತಿಯೊಂದು ಕ್ಷೇತ್ರದಲ್ಲಿಯೂ, ಪರಿಹಾರಗಳು ನೈಜ ಸಮಯದಲ್ಲಿ ತಲುಪಿದಾಗ ಮಾತ್ರ ಅದರ ಮೌಲ್ಯವರ್ಧನೆ ಸಾಧ್ಯವಾಗುತ್ತದೆ. ರಾಷ್ಟ್ರೀಯ ಭದ್ರತೆ ಮಾತ್ರವಲ್ಲದೇ, ಎಲ್ಲಾ ರೀತಿಯ ಭದ್ರತಾ ವಲಯಗಳ ನೈಜ ಭವಿಷ್ಯವು ಉದಯೋನ್ಮುಖ ತಂತ್ರಜ್ಞಾನಗಳನ್ನು ಸದುಪಯೋಗಪಡಿಸಿಕೊಳ್ಳುವುದನ್ನು ಮತ್ತು ಅವು ಮಾನವೀಯತೆಯನ್ನು ಕಾಯ್ದುಕೊಳ್ಳುವ ಅಂಶಗಳನ್ನು ಆಧರಿಸಿದೆ", ಎಂದು ಅವರು ಹೇಳಿದರು.