ಎರಿಕ್ ಅಲೆಕ್ಸಾಂಡರ್ ಒಝೇರಿಯೊ ಅಂತ್ಯಕ್ರಿಯೆಯನ್ನು ಪೊಲೀಸ್ ಗೌರವದೊಂದಿಗೆ ನಡೆಸಲು ಸರಕಾರ ಆದೇಶ
Update: 2025-08-30 21:50 IST
ಬೆಂಗಳೂರು, ಆ.30: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎರಿಕ್ ಅಲೆಕ್ಸಾಂಡರ್ ಒಝೇರಿಯೊ ಅವರು ಆ.29ರಂದು ಮೃತಪಟ್ಟಿದ್ದು, ಅವರ ಅಂತ್ಯಕ್ರಿಯೆಯನ್ನು ಪೊಲೀಸ್ ಗೌರವದೊಂದಿಗೆ ನಡೆಸುವಂತೆ ಸರಕಾರ ಆದೇಶಿಸಿದೆ.
ಎರಿಕ್ ಅಲೆಕ್ಸಾಂಡರ್ ಒಝೇರಿಯೊ ಅವರು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷರಾಗಿದ್ದು, ಅವರು ನಿಧನರಾಗಿರುವುದಕ್ಕೆ ರಾಜ್ಯ ಸರಕಾರವು ತೀವ್ರ ಸಂತಾಪ ಸೂಚಿಸಿದೆ.