×
Ad

ಹೈಕೋರ್ಟ್, ಇಸ್ರೇಲ್ ರಾಯಭಾರ ಕಚೇರಿಯಲ್ಲಿ ಸ್ಫೋಟಕ ಇರಿಸಿರುವುದಾಗಿ ಬೆದರಿಕೆ : ಪ್ರಕರಣ ದಾಖಲು

Update: 2025-10-04 23:41 IST

ಬೆಂಗಳೂರು, ಅ.4: ಇಸ್ರೇಲ್ ರಾಯಭಾರ ಕಚೇರಿ ಹಾಗೂ ಹೈಕೋರ್ಟ್‍ನಲ್ಲಿ ಸ್ಫೋಟಕ ಇರಿಸಿರುವುದಾಗಿ ಇ-ಮೇಲ್ ಮೂಲಕ ಬೆದರಿಕೆ ಹಾಕಿದ್ದ ಆರೋಪಿಯ ವಿರುದ್ಧ ಇಲ್ಲಿನ ಹಲಸೂರು ಗೇಟ್ ಹಾಗೂ ವಿಧಾನಸೌಧ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

ಸೆಪ್ಟೆಂಬರ್ 19 ರಂದು ಇ-ಮೇಲ್ ಸ್ವೀಕರಿಸಲಾಗಿದ್ದು, ಪೊಲೀಸರು ತಪಾಸಣೆ ನಡೆಸಿದಾಗ ಇದೊಂದು ಹುಸಿ ಬೆದರಿಕೆ ಎಂದು ದೃಢಪಟ್ಟಿದೆ.

ಇ-ಮೇಲ್ ಖಾತೆಯಿಂದ ವ್ಯಕ್ತಿಯೊಬ್ಬರ ಹೆಸರಿನಲ್ಲಿ ಇಸ್ರೇಲ್ ರಾಯಭಾರ ಕಚೇರಿ ಹಾಗೂ ಹೈಕೋರ್ಟ್‍ಗೆ ಪ್ರತ್ಯೇಕವಾಗಿ ಮೇಲ್ ಕಳುಹಿಸಿರುವ ಆರೋಪಿ, ‘6 ಆರ್‌ ಡಿಎಕ್ಸ್ ಇರಿಸಲಾಗಿದ್ದು, ಅದು ಸ್ಫೋಟ ಆಗಲಿವೆ’ ಎಂದು ಬರೆದಿದ್ದಾನೆ. ಈ ಬಗ್ಗೆ ಸಿಬ್ಬಂದಿಯು ತಕ್ಷಣ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು. ಪೊಲೀಸರ ತೀವ್ರ ತಪಾಸಣೆಯ ನಂತರ ಇದೊಂದು ಹುಸಿ ಬೆದರಿಕೆ ಎಂದು ತಿಳಿದು ಬಂದಿದೆ.

ಸದ್ಯ ಮೇಲ್ ಕಳುಹಿಸಲಾದ ಖಾತೆಯ ಐಪಿ ಅಡ್ರೆಸ್ ಮೂಲಕ ಆರೋಪಿ ಪತ್ತೆಗೆ ಮುಂದಾಗಿದ್ದು, ಸರ್ವಿಸ್ ಪ್ರೊವೈಡರ್ ಕಂಪೆನಿಯಿಂದ ಮಾಹಿತಿ ಕೋರಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News