×
Ad

ಪರಪ್ಪನ ಅಗ್ರಹಾರ ಜೈಲಿನೊಳಗೆ ರೌಡಿಶೀಟರ್ ಹುಟ್ಟುಹಬ್ಬದ ಪಾರ್ಟಿ : ಸಾರ್ವಜನಿಕರ ಆಕ್ರೋಶ

Update: 2025-10-04 23:42 IST

ಬೆಂಗಳೂರು, ಅ.4: ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದೊಳಗೆ ಓರ್ವ ರೌಡಿಶೀಟರ್ ಕೇಕ್‍ಕಟ್ ಮಾಡಿ ಭರ್ಜರಿಯಾಗಿ ಹುಟ್ಟುಹಬ್ಬದ ಪಾರ್ಟಿ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ನಟ ದರ್ಶನ್ ಪ್ರಕರಣದ ಬಳಿಕ ಜೈಲಿನಲ್ಲಿ ರಾಜಾತಿಥ್ಯಕ್ಕೆ ಕಡಿವಾಣ ಹಾಕಿದ್ದೇವೆ ಎಂದು ಜೈಲಾಧಿಕಾರಿಗಳು ಹೇಳಿದ್ದರು. ಆದರೆ, ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ರೌಡಿಶೀಟರ್ ಶ್ರೀನಿವಾಸ್ ಯಾನೆ ಗುಬ್ಬಚ್ಚಿ ಸೀನಾ ಎಂಬಾತ ಜೈಲಿನಲ್ಲೇ ಭರ್ಜರಿಯಾಗಿ ಹುಟ್ಟು ಹಬ್ಬದ ಸಂಭ್ರಮಾಚರಣೆ ಮಾಡಿಕೊಂಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ರೌಡಿಶೀಟರ್ ಶ್ರೀನಿವಾಸ್ ಸೇಬು ಹಣ್ಣಿನ ಹಾರ ಹಾಕಿಕೊಂಡು, ಜೈಲಿನ ಬ್ಯಾರಕ್‍ನಲ್ಲಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಮೊಬೈಲ್‍ನಲ್ಲಿ ಹುಟ್ಟುಹಬ್ಬ ಪಾರ್ಟಿಯ ವಿಡಿಯೋ, ಫೊಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News