×
Ad

ಸಂಶೋಧನೆಗಳು ವಿಮರ್ಶಾತ್ಮಕವಾಗಿದ್ದರೆ ಉತ್ತಮ : ಪ್ರೊ.ವೀಣಾದೇವಿ

ಡಾ.ಮನೋಹನ್ ಸಿಂಗ್ ವಿಶ್ವವಿದ್ಯಾಲಯದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ

Update: 2025-12-30 23:22 IST

ಬೆಂಗಳೂರು : ಡಾ.ಮನೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗವು ಆಯೋಜಿಸಿದ್ದ ʼ21ನೇ ಶತಮಾನದಲ್ಲಿ ರಾಜಕೀಯ ವಿಜ್ಞಾನ ಸಂಶೋಧನೆ ಮತ್ತು ಭಾರತೀಯ ಸಾರ್ವತ್ರಿಕ ಚುನಾವಣೆಗಳಲ್ಲಿ ಮತದಾನದ ನಡವಳಿಕೆಗಳು'’ ಎಂಬ ವಿಷಯಧಾರಿತವಾಗಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮವು ಬಿಸಿಯು ಸೆಮಿನಾರ್ ಸಭಾಂಗಣದಲ್ಲಿ ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಬೆಂ.ವಿ.ವಿ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ.ವೀಣಾದೇವಿ ಮಾತನಾಡಿ, ಪ್ರಸ್ತುತ ಕಾಲದಲ್ಲಿ ಸಂಶೋಧನೆ ಎಂಬುದು ಪರಿಣಾಮಕಾರಿಯಾಗಿ ಪರಿಣಮಿಸಬೇಕಾಗಿದೆ. ಸಂಶೋಧನೆಗಳಿಗೆ ಡಿಜಿಟಲ್ ಉಪಕರಣಗಳು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿದ್ದು, ಸಂಶೋಧನೆಗಳು ಎಂದಿಗೂ ವಿಮರ್ಶಾತ್ಮಕವಾಗಿದ್ದರೆ ಸೂಕ್ತ ಎಂದು ಅಭಿಪ್ರಾಯಪಟ್ಟರು.

ಸಂಶೋಧನಾ ಅಧ್ಯಯನಗಳಲ್ಲಿ ರಾಜ್ಯಶಾಸ್ತ್ರ ಸಂಶೋಧನೆಯು ವಿವಿಧ ವಲಯಗಳ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮತ್ತು ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪ್ರಭಾವ ಬೀರಿದೆ. 21ನೇ ಶತಮಾನದಲ್ಲಿ ರಾಜ್ಯದ ಪಾತ್ರ ವಿಸ್ತರಿಸಿದಂತೆ ರಾಜ್ಯಶಾಸ್ತ್ರ ಸಂಶೋಧನಾ ವಿಷಯಗಳ ಮೇಲೆ ಸಂಶೋಧನೆಗಳು ಅತ್ಯಗತ್ಯ ಎಂದು ಅವರು ತಿಳಿಸಿದರು.

ಹೊಸದಿಲ್ಲಿಯ ಸಿಎಸ್‍ಡಿಎಸ್‍ನ ಲೋಕ ನೀತಿಯ ಸಹ ಸಂಯೋಜಕ ಡಾ.ನಾಗೇಶ್ ಕೆ.ಎಲ್. ಅವರು ʼಮತದಾನದ ಪ್ರಾಮುಖ್ಯತೆ' ಕುರಿತಾಗಿ ಮಾತನಾಡುತ್ತಾ, ಪ್ರಸ್ತುತ ಕಾಲದಲ್ಲಿ ರಾಜಕೀಯವು ಹದೆಗೆಡುತ್ತಿದೆ. ಯುವ ಸಮೂಹ ಯಾವುದೇ ಅಮಿಷಕ್ಕೆ ಒಳಗಾಗದೇ ನಿಮ್ಮ ಹಕ್ಕು ಮತ ನೀಡಬೇಕೆಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಸಿಯುನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ.ಜಲಜಾ ಕೆ.ಆರ್. ವಹಿಸಿದ್ದರು.

ರಾಜ್ಯಶಾಸ್ತ್ರ ವಿಭಾಗದ ಡಾ.ಎಚ್.ವಿ.ನಾಗರಾಜು, ಡಾ.ರಾಕೇಶ್ ಆರ್. ದೇಸ್ಕರ್, ಅಮರ್ ಎಸ್.ರಾವ್, ಮಾನ್ಸಿ ಕುಮಾರಿ, ಡಾ.ರವಿಕುಮಾರ್ ಉಪಸ್ಥಿತರಿದ್ದರು.

ರಾಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ಕೀರ್ತನಾ ಸ್ವಾಗತಿಸಿ, ಅರುಣ್ ಕುಮಾರ್ ವಂದಿಸಿದರು. ಪ್ರಜ್ವಲ್ ಹಾಗೂ ಮೀನಾ ಪ್ರಾರ್ಥಿಸಿದರು. ದ್ವಿತೀಯ ವರ್ಷದ ರಾಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ನಯನಾ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News