×
Ad

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ | ಅ.18 ರೊಳಗೆ ಸಹಾಯವಾಣಿ ಮೂಲಕ ನೋಂದಣಿಗೆ ಅವಕಾಶ : ಜಿಲ್ಲಾಧಿಕಾರಿ ಜಗದೀಶ್

Update: 2025-10-15 23:28 IST


ಬೆಂಗಳೂರು, ಅ.15: ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸಂಬಂಧಿಸಿದಂತೆ ಬೆಂಗಳೂರು ನಗರ ಜಿಲ್ಲೆಯ ನಾಗರಿಕರು ಸಮೀಕ್ಷೆಗೆ ತಮ್ಮ ಮಾಹಿತಿ ನೋಂದಾಯಿಸಲು ಅನುಕೂಲವಾಗುವಂತೆ ಸಹಾಯವಾಣಿ ಸಂಖ್ಯೆಯನ್ನು ಒದಗಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ಜಿ. ತಿಳಿಸಿದ್ದಾರೆ.

ಬುಧವಾರ ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಸಮೀಕ್ಷೆಗೆ ನೋಂದಾಯಿಸಿಕೊಳ್ಳದೆ ಉಳಿದಿರುವ ಬೆಂಗಳೂರು ನಗರ ಜಿಲ್ಲಾ ನಿವಾಸಿಗಳು ಅ.18ರೊಳಗಾಗಿ ತಮ್ಮ ವಿವರಗಳನ್ನು ತಾಲೂಕು ಕಚೇರಿ ಹಾಗೂ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ಸಹಾಯವಾಣಿ ಸಂಖ್ಯೆಗಳಿಗೆ ಕರೆ ಮಾಡಿ ನೋಂದಾಯಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.

ಬೆಂಗಳೂರು ಉತ್ತರ ತಾಲೂಕಿನಲ್ಲಿ ಮಧುರಾಜ್(ಸಹಾಯವಾಣಿ ಸಂಖ್ಯೆ-9916681192), ಬೆಂಗಳೂರು ದಕ್ಷಿಣ ತಾಲೂಕು-ಅಶ್ವಿನಿ(9019242803), ಬೆಂಗಳೂರು ಪೂರ್ವ ತಾಲೂಕು- ರಾಜೀವ್(9632339738), ಯಲಹಂಕ ತಾಲೂಕು-ಶ್ರೇಯಸ್ಸ್(8660575524), ಆನೇಕಲ್ ತಾಲೂಕು-ಶಶಿಧರ್ ಮಾಡಿಯಾಳ್(9449289995), ಹೆಬ್ಬಗೋಡಿ ನಗರಸಭೆ-ರಾಜೇಂದ್ರ ಬಿ.ಎಲ್(080-27833736), ಮಾದನಯಕನಹಳ್ಳಿ ನಗರಸಭೆ-ಆರ್.ಮಂಜುನಾಥ್(7975559204).

ಆನೇಕಲ್ ಪುರಸಭೆ-ಎಚ್.ಎ.ಕುಮಾರ್(080-27830092), ಅತ್ತಿಬೆಲೆ ಪುರಸಭೆ-ದೊಡ್ಡ ಅವಲಪ್ಪ(8296350533), ಬೊಮ್ಮಸಂದ್ರ ಪುರಸಭೆ-ವೆಂಕಟೇಶಪ್ಪ ಬಿ.ಆರ್.(080-27834655), ಚಂದಾಪುರ ಪುರಸಭೆ-ಮಂಜುನಾಥ(080-27832411), ಜಿಗಣಿ ಪುರಸಭೆ- ರಾಜೇಶ್(080-29760400), ಹುಣಸಮಾರನಹಳ್ಳಿ ಪುರಸಭೆ-ಕಾಂತರಾಜು(080-23901684).

ಚಿಕ್ಕಬಾಣಾವರ ಪುರಸಭೆ-ಮಂಜುನಾಥ ಎಸ್.(8546824510), ಕೋನಪ್ಪನ ಅಗ್ರಹಾರ ಪುರಸಭೆ-ಎ.ಮುನಿರಾಜು(080-22441443), ದೊಡ್ಡತೊಗೂರು ಪಟ್ಟಣ ಪಂಚಾಯಿತಿ- ರಾಜೇಶ್(080-22111177) ಅವರ ಸಹಾಯವಾಣಿ ಸಂಖ್ಯೆ ಮೂಲಕ ಸಂಪರ್ಕಿಸಿ ತಮ್ಮ ಮಾಹಿತಿಯನ್ನು ನೋಂದಾಯಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಕೋರಿದ್ದಾರೆ.



Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News