×
Ad

ವೈದ್ಯಕೀಯ ಕೋರ್ಸ್‍ಗಳಿಗೆ 18,867 ಸೀಟು ಹಂಚಿಕೆ

Update: 2025-09-23 19:51 IST

ಬೆಂಗಳೂರು, ಸೆ.23 : ವೈದ್ಯಕೀಯ, ದಂತ ವೈದ್ಯಕೀಯ ಪದವಿ ಕೋರ್ಸ್‍ಗಳ ಎರಡನೇ ಹಾಗೂ ಆಯುಷ್‌ ಕೋರ್ಸ್ ಗಳ ಮೂರನೇ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು ಪ್ರಕಟಿಸಿದ್ದು, ಈ ಕೋರ್ಸ್‍ಗಳಿಗೆ ಇದುವರೆಗೂ ಒಟ್ಟು 18,867 ಸೀಟು ಹಂಚಿಕೆ ಮಾಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.

ಮಂಗಳವಾರ ಪ್ರಕಟನೆ ಹೊರಡಿಸಿರುವ ಅವರು, ಎರಡೂ ಸುತ್ತುಗಳಿಂದ ವೈದ್ಯಕೀಯ ಕೋರ್ಸ್ ಗೆ 9,958, ದಂತ ವೈದ್ಯಕೀಯ ಕೋರ್ಸ್ ಗೆ 2,658 ಮತ್ತು ಆಯುಷ್‌ ಕೋರ್ಸ್ ಗಳಿಗೆ 6,257 ಸೀಟು ಹಂಚಿಕೆ ಮಾಡಲಾಗಿದೆ. ಈ ಸುತ್ತಿನಲ್ಲಿ ಸೀಟು ಹಂಚಿಕೆಯಾದವರಿಗೆ ಶುಲ್ಕ ಪಾವತಿಸಲು ಸೆ.26ರವರೆಗೆ ಹಾಗೂ ಕಾಲೇಜಿಗೆ ವರದಿ ಮಾಡಿಕೊಳ್ಳಲು ಸೆ.28ರವರೆಗೆ ಅವಕಾಶ ನೀಡಲಾಗಿದೆ ಎಂದಿದ್ದಾರೆ.

ಇದುವರೆಗಿನ ಸೀಟು ಹಂಚಿಕೆ ನಂತರ ವೈದ್ಯಕೀಯ ಕೋರ್ಸ್‍ನಲ್ಲಿ 158 ಸೀಟು, ದಂತ ವೈದ್ಯಕೀಯದಲ್ಲಿ 50 ಹಾಗೂ ಆಯುಷ್‌ ಕೋರ್ಸ್‍ನಲ್ಲಿ 6,251 ಸೀಟುಗಳು ಉಳಿದಿವೆ. ಇವಲ್ಲದೆ, ಎರಡನೇ ಸುತ್ತಿನಲ್ಲಿ ಹಂಚಿಕೆಯಾದ ಸೀಟುಗಳಿಗೆ ಪ್ರವೇಶ ಪಡೆಯದೇ ಉಳಿಯುವ ಸೀಟುಗಳನ್ನು ಮಾಪ್ ಅಪ್ ಸುತ್ತಿನ ಸೀಟು ಹಂಚಿಕೆಗೆ ಪರಿಗಣಿಸಲಾಗುವುದು ಎಂದು ಅವರು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News