×
Ad

‘ಕೆಎಸ್ಸಾರ್ಟಿಸಿ’ 2 ಸಾವಿರ ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿ ಪ್ರಕಟ

Update: 2025-06-14 22:21 IST

ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ)ಯ ಚಾಲಕ ಕಂ ನಿರ್ವಾಹಕರ 2 ಸಾವಿರ ಹುದ್ದೆಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿ, ಅಂಕಗಳ ವಿವರಗಳನ್ನು ಸಂಸ್ಥೆಯು ಶನಿವಾರ ಪ್ರಕಟಿಸಿದೆ.

ಸಂಭವನೀಯ ಆಯ್ಕೆ ಪಟ್ಟಿಗೆ ಸ್ವೀಕರಿಸಿರುವ ಆಕ್ಷೇಪಗಳನ್ನು ಪರಿಶೀಲಿಸಿ ಅಂತಿಮ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಇಲ್ಲಿನ ಶಾಂತಿನಗರದಲ್ಲಿರುವ ನಿಗಮದ ಕೇಂದ್ರ ಕಚೇರಿಯಲ್ಲಿ ಮತ್ತು ನಿಗಮದ ವೆಬ್‍ಸೈಟ್ ksrtcjobs.karnataka.gov.inನಲ್ಲಿ ಪ್ರಕಟಿಸಲಾಗಿದೆ. ಆಯಾ ಪ್ರವರ್ಗದಲ್ಲಿ ಸ್ಥಾನ ಪಡೆದ ಕೊನೆಯ ಅಭ್ಯರ್ಥಿ ಪಡೆದ ಅಂಕ, ಹುಟ್ಟಿದ ದಿನಾಂಕವನ್ನು ನೀಡಲಾಗಿದೆ.

ಜೂ.16ರಿಂದ 19ರ ವರೆಗೆ ಇಲ್ಲಿನ ಶಾಂತಿನಗರದ ಕೇಂದ್ರ ಕಚೇರಿಯಲ್ಲಿ ಗಣಕೀಕೃತ ಕೌನ್ಸೆಲಿಂಗ್ ನಡೆಯಲಿದೆ. ಅಭ್ಯರ್ಥಿಗಳನ್ನು ಜೇಷ್ಠತೆ ಅನುಸಾರ ಈ ವಿಭಾಗ, ಘಟಕಗಳಿಗೆ ನೇರವಾಗಿ ನಿಯೋಜನೆ ಮಾಡಲಾಗುವುದು. ಕೌನ್ಸೆಲಿಂಗ್ ದಿನಾಂಕ, ಸಮಯವನ್ನು 2 ಅಭ್ಯರ್ಥಿಗಳಿಗೆ ಎಸ್‍ಎಂಎಸ್ ಮೂಲಕ ತಿಳಿಸಲಾಗುವುದು.

ಕೌನ್ಸಿಲಿಂಗ್: ಜೂ.16ರ ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಕ್ರಮ ಸಂಖ್ಯೆ 1-325, ಮಧ್ಯಾಹ್ನ 2 ಗಂಟೆಯಿಂದ ಕ್ರಮಸಂಖ್ಯೆ-326-650ರ ವರೆಗೆ. ಜೂ.18ರ ಬೆಳಗ್ಗೆ 8ಗಂಟೆಯಿಂದ ಮಧ್ಯಾಹ್ನ 1ಗಂಟೆಯ ವರೆಗೆ 651-1050, ಮಧ್ಯಾಹ್ನ 1.30ರಿಂದ ಕ್ರಮ ಸಂಖ್ಯೆ 1051-1350 ವರೆಗೆ. ಜೂ. 19ರ ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 1ಗಂಟೆಯ ವರೆಗೆ ಕ್ರಮ ಸಂಖ್ಯೆ 1351-1700 ಹಾಗೂ ಮಧ್ಯಾಹ್ನ 1.30ರಿಂದ ಕ್ರಮ ಸಂಖ್ಯೆ 1701-2000 ವರೆಗೆ ನಡೆಯಲಿದೆ.

ಆಮಿಷಕ್ಕೆ ಬಲಿಯಾಗಬೇಡಿ: ‘ಸದರಿ ನೇಮಕಾತಿ ಮತ್ತು ಸ್ಥಳ ನಿಯೋಜನೆಯು ಸಂಪೂರ್ಣ ಪಾರದರ್ಶಕವಾಗಿ ನಡೆಯುತ್ತಿದ್ದು, ಮಾನವ ಹಸ್ತಕ್ಷೇಪ ರಹಿತವಾಗಿದ್ದು, ಗಣಕೀಕೃತ ವ್ಯವಸ್ಥೆಯ ಮೂಲಕ ನೇರ ನಿಯೋಜನೆ ನಡೆಯುತ್ತಿರುವುದರಿಂದ ಅಭ್ಯರ್ಥಿಗಳು ಯಾವುದೇ ಆಮಿಷ ಅವ್ಯವಹಾರದಲ್ಲಿ ತೊಡಗಬಾರದು’ ಎಂದು ಆಯ್ಕೆ ಸಮಿತಿ ಅಧ್ಯಕ್ಷರೂ ಆಗಿರುವ ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News