×
Ad

ಇನ್ವೆಸ್ಟ್ ಕರ್ನಾಟಕ-2025: ಅತ್ಯುತ್ತಮ ಉದ್ಯಮ ಸಂಸ್ಥೆಗಳಿಗೆ ಪ್ರಶಸ್ತಿ ವಿತರಣೆ

Update: 2025-02-14 23:08 IST

ಬೆಂಗಳೂರು: ಜಾಗತಿಕ ಹೂಡಿಕೆದಾರರ ಸಮಾವೇಶದ ಸಮಾರೋಪದಲ್ಲಿ 38 ಅತ್ಯುತ್ತಮ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ಗುರುತಿಸಿ ರಾಜ್ಯ ಸರಕಾರ ಶುಕ್ರವಾರ ಪ್ರಶಸ್ತಿ ನೀಡಿ ಗೌರವಿಸಿತು.

ಎಂಎಸ್‍ಎಂಇ ವಲಯದಲ್ಲಿ ನಾವೀನ್ಯತೆ ಮತ್ತು ಒಳಗೊಳ್ಳುವಿಕೆಯನ್ನು ಉತ್ತೇಜಿಸಲು ಕರ್ನಾಟಕದ ಬದ್ಧತೆಯನ್ನು ಪ್ರತಿಬಿಂಬಿಸುವ ವಲಯದ ಶ್ರೇಷ್ಠತೆ ಪ್ರಶಸ್ತಿ, ಸಬಲೀಕರಣ ಸಾಧನೆ ಪ್ರಶಸ್ತಿ, ಅತ್ಯುತ್ತಮ ಮಹಿಳಾ ಉದ್ಯಮಿ ಪ್ರಶಸ್ತಿ ಮತ್ತು ಜಿಲ್ಲೆಯ ಅತ್ಯುತ್ತಮ ಪ್ರದರ್ಶನ ಸೇರಿದಂತೆ ಹಲವು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಯಿತು.

ಎಂಎಸ್‍ಎಂಇ ಪ್ರಶಸ್ತಿಗಳ ವಿಜೇತರು: ಏರೋಸ್ಪೇಸ್ ಮತ್ತು ಡಿಫೆನ್ಸ್: ಸೌತ್‍ಫೀಲ್ಡ್ ಕೋಟಿಂಗ್ಸ್ ಪ್ರೈವೇಟ್ ಲಿಮಿಟೆಡ್ (ಕೋಲಾರ), ಆಟೋ, ಆಟೋ ಕಾಂಪೊನೆಂಟ್ಸ್ ಮತ್ತು ಇಗಿ: ಗೋಕುಲ್ ಮೆಟಾಟೆಕ್ ಪ್ರೈ. ಲಿಮಿಟೆಡ್(ಬೆಳಗಾವಿ), ಕ್ಲೀನ್ ಎನರ್ಜಿ: ಎಲ್‍ಇಓ ಇಂಜಿನಿಯರ್ಸ್ (ಬೆಳಗಾವಿ), ಎಫ್‍ಎಂಸಿಜಿ, ಚಿಲ್ಲರೆ ಮತ್ತು ಕೃಷಿ-ಸಂಸ್ಕರಣೆ: ವೆಸ್ಟರ್ನ್ ಕಾಫಿ ಕ್ಯೂರರ್ಸ್ ಅಂಡ್ ಎಕ್ಸ್‌ ಪೋಟ್ರ್ಸ್ ಪ್ರೈವೇಟ್ ಲಿಮಿಟೆಡ್ (ಕೊಡಗು), ಹೆಲ್ತ್‌ ಕೇರ್, ಬಯೋಟೆಕ್ ಮತ್ತು ಫಾರ್ಮಾಸ್ಯುಟಿಕಲ್ಸ್: ಬಾರ್‍ಕೋಡ್ ಬಯೋಸೈನ್ಸ್ ಪ್ರೈವೇಟ್ ಲಿಮಿಟೆಡ್ (ಬೆಂಗಳೂರು-ನಗರ), ಮೆಷಿನ್ ಟೂಲ್ಸ್ ಮತ್ತು ಕ್ಯಾಪಿಟಲ್ ಗೂಡ್ಸ್: ತ್ರಿಶೂಲ್ ವೈಂಡಿಂಗ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ (ರಾಮನಗರ), ಇಎಸ್‍ಡಿಎಂ: ಸ್ಟ್ರಾಟೆಜಿ ಆಟೋಮೇಷನ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ (ಮೈಸೂರು), ಜವಳಿ, ಕರಕುಶಲ ಮತ್ತು ಕೈಮಗ್ಗಗಳು: ಶ್ರೀ ನಂದೀಶ್ವರ್ ಜಿನ್ ಪ್ರೆಸ್ ಇಂಡಸ್ಟ್ರೀಸ್ (ಬೆಂಗಳೂರು-ಗ್ರಾಮೀಣ), ಕೋರ್ ಮ್ಯಾನುಫ್ಯಾಕ್ಚರಿಂಗ್: ಎಚ್‍ಐಪಿಎಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ರಾಯಚೂರು), ಕಲರ್‍ಫ್ಲೆಕ್ಸ್ ಗ್ಲೋಬಲ್ ಪ್ರೈ. ಲಿಮಿಟೆಡ್(ರಾಮನಗರ) ಕಂಪೆನಿಗಳಿಗೆ ಸೆಕ್ಟರ್ ಎಕ್ಸಲೆನ್ಸ್ ಪ್ರಶಸ್ತಿಯನ್ನು ನೀಡಲಾಯಿತು. ಅಲ್ಲದೆ, ತುಮಕೂರಿನ ಅರ್ಥನ್ಸ್‌ಗೆ ಸಬಲೀಕರಣ ಸಾಧನೆ ಪ್ರಶಸ್ತಿ ಹಾಗೂ ನೇತ್ರಾವತಿ ಪಾಲಿಪ್ಯಾಕ್ ಪ್ರೈವೇಟ್ ಲಿಮಿಟೆಡ್ (ಬಾಗಲಕೋಟೆ)ಗೆ ಅತ್ಯುತ್ತಮ ಮಹಿಳಾ ಉದ್ಯಮಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಜಿಲ್ಲೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕೃಷ್ಣ ಸಾಗರ ನೀರಾವರಿ (ಬಾಗಲಕೋಟೆ), ವೈಬ್ರೆಟೆಕ್ ಅಕೌಸ್ಟಿಕ್ ಪ್ರಾಡಕ್ಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಬೆಳಗಾವಿ), ಎಂ/ಎಸ್ ಹ್ಯಾಲೀಸ್ ಬ್ಲೂ ಸ್ಟೀಲ್ಸ್ ಪ್ರೈವೇಟ್ ಲಿಮಿಟೆಡ್ (ಬಳ್ಳಾರಿ), ಟಿಐಇಎ ಕನೆಕ್ಟರ್ಸ್ ಪ್ರೈವೇಟ್ ಲಿಮಿಟೆಡ್ (ಬೆಂಗಳೂರು-ಗ್ರಾಮೀಣ), ಕರ್ನಾಟಕ ಕಾಗದ ಉದ್ಯಮ (ಬೀದರ್), ಚೆಂಗ್ವಾಂಗ್ ನ್ಯಾಚುರಲ್ ಎಕ್ಸ್‍ಟ್ರಾಕ್ಟ್ಸ್ (ಭಾರತ) ಪ್ರೈವೇಟ್ ಲಿಮಿಟೆಡ್ (ಚಾಮರಾಜನಗರ), ಶ್ರೀವಾಸವಿ ಅಡ್ಹೆಸಿವ್ ಟೇಪ್ಸ್ ಲಿಮಿಟೆಡ್ (ಚಿಕ್ಕಬಳ್ಳಾಪುರ), ಆರ್.ರಾಗ್ರೋಟೆಕ್ (ಚಿತ್ರದುರ್ಗ), ಓಶಿಮಾ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ (ದಕ್ಷಿಣ ಕನ್ನಡ), ಶ್ರೀ ಮಲ್ಲಿಕಾರ್ಜುನ ಇಂಡಸ್ಟ್ರೀಸ್ (ದಾವಣಗೆರೆ), ಶ್ರೀ ಸಾಯಿ ಅಗ್ರೋ ಎಕ್ವಿಪ್ಮೆಂಟ್ಸ್ ಪ್ರೈವೇಟ್ ಲಿಮಿಟೆಡ್ (ಧಾರವಾಡ), ಹರ್ಷ ಹೋಮ್ ಪ್ರಾಡಕ್ಟ್ಸ್ (ಗದಗ), ಇಇಕೆ-ಪಿಐಕೆ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ (ಹಾಸನ), ಫ್ರೆಶ್ರ್ಗೀನ್ ಆಗ್ರೋ ಎಕ್ಸ್‍ಪೋಟ್ರ್ಸ್ ಪ್ರೈವೇಟ್ ಲಿಮಿಟೆಡ್ (ಹಾವೇರಿ), ಸಂಕಲ್ಪ ನೀರಾವರಿ ವ್ಯವಸ್ಥೆ (ಕಲಬುರ್ಗಿ), ಮೈಕ್ರೋಫೋರ್ (ಕೋಲಾರ), ಎಂ/ಎಸ್: ಎನ್‍ಒಎಫ್‍ಎಚ್ ಪ್ರೈವೇಟ್ ಲಿಮಿಟೆಡ್ (ಕೊಪ್ಪಳ), ರಂಗಸನ್ಸ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್ (ಮಂಡ್ಯ), ಸದರ್ನ್ ಆರ್ಟಿಸನ್ಸ್ ಕ್ರಾಫ್ಟ್ ಸೆಂಟರ್ ಪ್ರೈವೇಟ್ ಲಿಮಿಟೆಡ್ (ಮೈಸೂರು), ಕುಶಿ ಆಗ್ರೋ ಫುಡ್ಸ್ (ರಾಯಚೂರು), ಕಸ್ತೂರಿ ತೆಂಗಿನಕಾಯಿ ಸಂಸ್ಕರಣೆ (ರಾಮನಗರ), ಸಿಸ್ಟಮ್ ರ್ಯಾಕ್ ಟೆಕ್ನಾಲಜೀಸ್ (ತುಮಕೂರು), ಆದಿತ್ಯ ಎಕ್ಸ್‌ ಪೋಟ್ರ್ಸ್ (ಉಡುಪಿ), ಎಸ್.ಎಂ.ಎಂಟರ್‍ಪ್ರೈಸಸ್ (ಉತ್ತರ ಕನ್ನಡ), ಗಜಲಕ್ಷ್ಮೀ ಮೆಟಲ್ ಪ್ರಾಡಕ್ಟ್ಸ್(ವಿಜಯಪುರ), ಏಷ್ಯನ್ ಆಗ್ರೋ ಮತ್ತು ಫುಡ್ ಪ್ರೊಸೆಸಿಂಗ್ ಇಂಡಸ್ಟ್ರೀಸ್ (ಯಾದಗಿರಿ) ಕಂಪೆನಿಗಳಿಗೆ ವಿವಿಧ ಪ್ರಶಸ್ತಿಗಳ ನೀಡಿ ಗೌರವಿಸಲಾಯಿತು.


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News