×
Ad

ಬೆಂಗಳೂರು | ಬೀದಿಬದಿ ವ್ಯಾಪಾರಿಗಳಿಗೆ ಉಚಿತವಾಗಿ 25 ತಳ್ಳುವ ಗಾಡಿ ವಿತರಣೆ

Update: 2025-07-06 21:13 IST

ಬೆಂಗಳೂರು : ಹಣ್ಣು, ತರಕಾರಿ ಸೇರಿದಂತೆ ದಿನಬಳಕೆ ವಸ್ತುಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಬೀದಿಬದಿ ವ್ಯಾಪಾರಿಗಳಿಗೆ ರಾಜಾಜಿನಗರದ ರಘುವೀರ್ ಎಸ್.ಗೌಡ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಉಚಿತವಾಗಿ ತಳ್ಳುವ ಗಾಡಿಗಳನ್ನು ವಿತರಣೆ ಮಾಡಲಾಯಿತು.

ರವಿವಾರ ಮಾಗಡಿ ಕ್ಷೇತ್ರದ ಶಾಸಕರು ಆಗಿರುವ ಕೆಆರ್.ಡಿಸಿಎಲ್ ಅಧ್ಯಕ್ಷ ಎಚ್.ಸಿ.ಬಾಲಕೃಷ್ಣ ಬಸವೇಶ್ವರ ನಗರ ವಾರ್ಡ್‍ನಲ್ಲಿ ವಿತರಿಸಲಾಯಿತು. ಬೀದಿಬದಿ ವ್ಯಾಪಾರಿಗಳಿಗೆ ತಳ್ಳುವ ಗಾಡಿಗಳನ್ನು ವಿತರಣೆ ಮಾಡಿದರು. ಈ ವೇಳೆ ರಾಜಾಜಿನಗರ ಕ್ಷೇತ್ರದ ಕಾಂಗ್ರೆಸ್ ಮುಖಂಡ ಹಾಗೂ ಟ್ರಸ್ಟ್‍ನ ರಘುವೀರ್ ಎಸ್. ಗೌಡ ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News