ಆಯುಧ ಪೂಜೆಗೆ ಪ್ರತಿ ಬಸ್‍ಗೆ 250 ರೂ.: ಕೆಎಸ್ಸಾರ್ಟಿಸಿ ಸ್ಪಷ್ಟನೆ
Update: 2025-09-27 22:47 IST
ಬೆಂಗಳೂರು, ಸೆ.27: ಆಯುಧ ಪೂಜೆಗೆ ಈ ಹಿಂದೆಯಿಂದ ನೀಡಲಾಗುತ್ತಿದ್ದ 100ರೂ.ಅನ್ನು 2024ರಿಂದಲೇ 250 ರೂ.ಗೆ ಹೆಚ್ಚಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಸ್ಪಷ್ಟನೆ ನೀಡಿದೆ.
ಶನಿವಾರ ಈ ಬಗ್ಗೆ ಪ್ರಕಟನೆ ನೀಡಿರುವ ಕೆಎಸ್ಸಾರ್ಟಿಸಿ, ಕೆಲವೊಂದು ಮಾಧ್ಯಮಗಳಲ್ಲಿ ಆಯುಧ ಪೂಜೆಗೆ ಪ್ರತಿ ಬಸ್‍ಗೆ 150 ರೂ. ಎಂದು ತಪ್ಪಾಗಿ ವರದಿಯಾಗಿದೆ. ಆಯುಧ ಪೂಜೆಗೆ 2008 ರವರೆಗೂ ಪ್ರತಿ ಬಸ್‍ಗೆ 10ರೂ. ನೀಡಲಾಗುತ್ತಿತ್ತು, ಇದನ್ನು 2009ರಲ್ಲಿ ಪ್ರತಿ ಬಸ್‍ಗೆ 30ರೂ.ಕ್ಕೆ ಏರಿಕೆ ಮಾಡಲಾಯಿತು ಎಂದು ತಿಳಿಸಿದೆ.
2016ರಲ್ಲಿ ಪ್ರತಿ ಬಸ್ಸಿಗೆ 50ರೂ.ಕ್ಕೆ ಏರಿಕೆ ಮಾಡಲಾಯಿತು ನಂತರ 2017ರಲ್ಲಿ ಪ್ರತಿ ಬಸ್‍ಗೆ 100 ರೂ. ಏರಿಕೆ ಮಾಡಲಾಗಿತ್ತು. 2023ರವರೆಗೂ ಪ್ರತಿ ಬಸ್‍ಗೆ ನೀಡುತ್ತಿದ್ದ 100 ರೂ. ಅನ್ನು 2024ರಿಂದ 250 ರೂ.ಗೆ ಹೆಚ್ಚಿಸಲಾಗಿದೆ ಎಂದು ತಿಳಿಸಿದೆ.