ಸೂರ್ಯಮಿತ್ರ ಪ್ರಶಸ್ತಿಗೆ ಅಮೆರಿಕಾದ ರಿಚಡ್ ಹ್ಯಾನ್ಸೆನ್ ಆಯ್ಕೆ : ನಾಳೆ(ಮೇ 27) ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ
ಬೆಂಗಳೂರು : ‘ಸೆಲ್ಕೋ ಸಂಸ್ಥೆ’ಯು ಪ್ರತಿ ವರ್ಷದಂತೆ ಈ ವರ್ಷವು ‘ಸೂರ್ಯಮಿತ್ರ’ ವಾರ್ಷಿಕ ಪ್ರಶಸ್ತಿಯನ್ನು ಪ್ರಕಟಿಸಿದ್ದು, ಅಮೆರಿಕಾದ ರಿಚಡ್ ಹ್ಯಾನ್ಸೆನ್ ಸೂರ್ಯಮಿತ್ರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ನಾಳೆ(ಮೇ 27) ನಗರದ ವೈಯಾಲಿ ಕಾವಲ್‍ನಲ್ಲಿರುವ ಚೌಡಯ್ಯ ಸ್ಮಾರಕ ಭವನದಲ್ಲಿ ಆಯೋಜಿಸಲಾಗಿದೆ.
ಅಭಿವೃದ್ಧಿಶೀಲ ರಾಷ್ಟ್ರಗಳ ಗ್ರಾಮೀಣ ಪ್ರದೇಶಗಳಲ್ಲಿ ಸೌರವಿದ್ಯುತ್ ಸೌಲಭ್ಯವನ್ನು ಹೆಚ್ಚಿಸಲು, ಆಧುನಿಕ ಫೋಟೋ ವೋಲ್ಟಾಯಿಕ್(ಪಿವಿ) ತಂತ್ರಜ್ಞಾನವನ್ನು ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಮೂಲಕ ಬೆಸೆದು ಪ್ರಸರಿಸುವಲ್ಲಿ ಮಹತ್ವದ ಪಾತ್ರ ವಹಿಸಿರುವ ಅಮೆರಿಕಾದ ರಿಚಡ್ ಹ್ಯಾನ್ಸೆನ್‍ರನ್ನು ಈ ಬಾರಿಯ ಸೂರ್ಯಮಿತ್ರ ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಸಮಾರಂಭದ ಉದ್ಘಾಟನೆಯನ್ನು ಹೈಕೋರ್ಟ್‍ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ನೆರವೇರಿಸಲಿದ್ದಾರೆ. ನೀತಿ ಆಯೋಗದ ಪ್ರಧಾನ ಆರ್ಥಿಕ ಸಲಹೆಗಾರ ಅಣ್ಣಾ ರಾಯ್, ಸೆಲ್ಕೋದ ನಿರ್ದೇಶಕಿ ಎಲಿನಾ ಕ್ಯಾಸೋಲೇರಿ, ಸೆಲ್ಕೋ ಫೌಂಡೇಶನ್‍ನ ಸಿಇಒ ಡಾ.ಹರೀಶ್ ಹಂದೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.