ಪಿಯುಸಿ ದಾಖಲಾತಿಗೆ ಜು.31ರವರೆಗೆ ಅವಧಿ ವಿಸ್ತರಣೆ
Update: 2025-07-26 23:36 IST
ಸಾಂದರ್ಭಿಕ ಚಿತ್ರ | PC : freepik.
ಬೆಂಗಳೂರು : 2025ನೇ ಸಾಲಿನ ಪ್ರಥಮ ಮತ್ತು ದ್ವಿತೀಯ ಪಿಯುಸಿ ತರಗತಿಗಳಿಗೆ ದಾಖಲಾತಿ ದಿನಾಂಕವನ್ನು ಜು.31ರವರೆಗೆ ವಿಸ್ತರಿಸಿ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಆದೇಶಿಸಿದೆ.
2025-26ನೇ ಶೈಕ್ಷಣಿಕ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ವೇಳಾಪಟ್ಟಿಯ ಮಾರ್ಗಸೂಚಿಯನ್ನು ಈಗಾಗಲೇ ಬಿಡುಗಡೆಗೊಳಿಸಲಾಗಿದ್ದು, ಅದರಂತೆ ದಾಖಲಾತಿಗಳು ಪ್ರಾರಂಭವಾಗಿವೆ. ಪ್ರಸ್ತುತ ವಿದ್ಯಾರ್ಥಿಗಳು ಇನ್ನೂ ದಾಖಲಾತಿ ಬಯಸಿ ಬರುತ್ತಿರುವುದರಿಂದ ದಾಖಲಾತಿ ದಿನಾಂಕವನ್ನು ವಿಸ್ತರಿಸಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದೆ.