×
Ad

ʼಬ್ರಹ್ಮಶ್ರೀ ನಾರಾಯಣಗುರು ಪ್ರಶಸ್ತಿʼಗೆ ಎಚ್.ಆರ್.ಜಯರಾಮ್, ಸರೋಜಾ ಬನಪ್ಪ ಸೇರಿ 5 ಮಂದಿ ಆಯ್ಕೆ

Update: 2025-11-14 23:31 IST

ಬೆಂಗಳೂರು : ಕರ್ನಾಟಕ ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರ ಮತ್ತು ವರದಿಗಾರರ ಸಂಘ ನೀಡುತ್ತಿರುವ ಬ್ರಹ್ಮಶ್ರೀ ನಾರಾಯಣ ಗುರು ಪ್ರಶಸ್ತಿಗೆ ಸಹಕಾರ ಕ್ಷೇತ್ರದಿಂದ ಸರೋಜಾ ಬನಪ್ಪ, ಸಮಾಜ ಸೇವಾ ಕ್ಷೇತ್ರದಿಂದ ಎಚ್.ಆರ್. ಜಯರಾಮ್, ವೈದ್ಯಕೀಯ ಕ್ಷೇತ್ರದಿಂದ ಡಾ.ನಾಗೇಶ್ ಬಸವರಾಜ, ಸಂಕೀರ್ಣ ಕ್ಷೇತ್ರದಿಂದ ಪುಂಡಲೀಕ ಕಲ್ಲಿಗನೂರ, ಸಮಾಜಸೇವಾ ಕ್ಷೇತ್ರದಿಂದ ಅಮಿತಾ ಆನಂದ್ ಅವರು ಆಯ್ಕೆಯಾಗಿದ್ದಾರೆ.

ನ.23ರಂದು ಬೆಳಗ್ಗೆ 11ಗಂಟೆಗೆ ಶೇಷಾದ್ರಿಪುರಂನಲ್ಲಿರುವ ಗ್ರೀನ್ ಪಾಥ್ ಹೊಟೇಲ್‍ನ ಸಭಾಂಗಣದಲ್ಲಿ ನಡೆಯುವ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News