×
Ad

ಕಾನೂನು ಉಲ್ಲಂಘಿಸಿದ ಆಸ್ಪತ್ರೆಗಳಿಗೆ 7 ಲಕ್ಷ ರೂ.ಗೂ ಅಧಿಕ ದಂಡ

Update: 2025-03-05 23:24 IST

PC : freepik.com

ಬೆಂಗಳೂರು : ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ಕಾಯ್ದೆ(ಕೆಪಿಎಂಇ) ನಿಯಮಗಳನ್ನು ಉಲ್ಲಂಘನೆ ಮಾಡಿರುವ ಖಾಸಗಿ ವೈದ್ಯಕೀಯ ಸಂಸ್ಥೆಗಳು/ಆಸ್ಪತ್ರೆಗಳು/ಕ್ಲಿನಿಕ್‍ಗಳು/ಪುನರ್ವಸತಿ ಕೇಂದ್ರ ಸೇರಿ 16 ಸಂಸ್ಥೆಗಳಿಗೆ 7,35,000 ರೂ.ಗಳ ದಂಡವನ್ನು ವಿಧಿಸಲಾಗಿದೆ.

ಬುಧವಾರ ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಪ್ರಕಟನೆ ಹೊರಡಿಸಿದ್ದು, 16 ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ದಂಡ ವಿಧಿಸಲಾಗಿದೆ. ಯಲಹಂಕದ ರಾಯ್ ಫೈಲ್ಸ್ ಕ್ಲಿನಿಕ್, ಕೆ.ಆರ್. ಪುರಂನ ಕಾಮಧೇನು ಪಂಚಗವ್ಯ ಚಿಕಿತ್ಸಾಲಯದ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ ಎಂದಿದ್ದಾರೆ.

ಸ್ಕಿನ್ ಡಿಸೈರ್ಸ್ ಡೆರ್ಮೊಕೋ ಆಸ್ಪತ್ರೆಯನ್ನು ಮುಚ್ಚಿಸಲಾಯಿತು. ಜಿಲ್ಲೆಯಲ್ಲಿ ಒಟ್ಟು 39 ಆರೋಗ್ಯ ಸಂಬಂಧಿತ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News