×
Ad

6 ಸಂಸ್ಥೆ, 20 ಮಹಿಳಾ ಸಾಧಕಿಯರಿಗೆ ʼರಾಣಿ ಚನ್ನಮ್ಮ ಪ್ರಶಸ್ತಿʼ ಪ್ರದಾನ

Update: 2025-03-08 21:26 IST

ಬೆಂಗಳೂರು : ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸಿದ 6 ಸಂಸ್ಥೆಗಳಿಗೆ, 20 ಮಹಿಳಾ ಸಾಧಕರು ಸೇರಿದಂತೆ ಒಟ್ಟು 26 ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಪ್ರದಾನ ಮಾಡಿದರು.

ಶನಿವಾರ ನಗರದ ರವೀಂದ್ರ ಕಲಾಕ್ಷೇತ್ರದ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಮತ್ತು ಸ್ತ್ರೀಶಕ್ತಿ ಗುಂಪು, ಒಕ್ಕೂಟಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

2024-25ನೇ ಸಾಲಿನ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಯನ್ನು ಚಿಕ್ಕಮಗಳೂರಿನ ಜನಚಿಂತನ ಪಟ್ಟಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ, ಬೆಂಗಳೂರಿನ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ, ಬಾಗಲಕೋಟೆಯ ಶ್ರೀದಾನೇಶ್ವರಿ ಮಹಿಳಾ ವಿದ್ಯುತ್ ಮಗ್ಗಗಳ ಸಹಕಾರಿ ಸಂಘ, ಉತ್ತರ ಕನ್ನಡ ಜಿಲ್ಲೆಯ ಚೇತನಾ ಸೇವಾ ಸಂಸ್ಥೆ, ಯಾದಗಿರಿಯ ರುಚಿ ಟ್ರಸ್ಟ್ ಹಾಗೂ ಧಾರವಾಡದ ನವಶ್ರೀ ಕಲಾಚೇತನ ಸಂಸ್ಥೆಗೆ ಪ್ರದಾನಿಸಲಾಯಿತು.

ಮಹಿಳೆಯರ ಅಭಿವೃದ್ಧಿಗಾಗಿ ಸೇವೆ ಸಲ್ಲಿಸಿರುವ ಭದ್ರಾವತಿಯ ಡಾ.ವೀಣಾ ಎಸ್.ಭಟ್, ಗದಗ ಡಾ.ಪೂಜಾ ಮಲ್ಲಪ್ಪ ಬೇವೂರ, ಉಡುಪಿಯ ಎಚ್.ಪ್ರೇಮಾ, ಹಾಸನ ಮೂಲದ ಎಸ್.ಆರ್.ರಶ್ಮಿ, ಶಿವಮೊಗ್ಗದ ಎಸ್.ನಾಝೀಮಾ, ಬೆಂಗೂರಿನ ಸುವರ್ಣ, ಮಂಡ್ಯದ ಮಂಜುಳಾ, ಧಾರವಾಡದ ಅದಿತಿ ಪರಪ್ಪ ಕ್ಷಾತ್ರತೇಜ ಅವರಿಗೆ ಪ್ರಶಸ್ತಿ ನೀಡಲಾಗಿದೆ.

ಕಲೆ ಕ್ಷೇತ್ರ: ಡಾ.ವೇದಾರಾಣಿ ದಾಸನೂರ,ಉಷಾಬಸಪ್ಪ, ವಿದುಷಿ: ರಜನಿ ಎಲ್.ಕರಿಗಾರ, ಎಸ್. ಪದ್ಮಾವತಿ, ಪೂಜಾ ರಘುನಂದನ್. ಸಾಹಿತ್ಯ ಕ್ಷೇತ್ರ: ರಿಶಲ್ ಬ್ರಿಟ್ಟಿ ಫೆನಾರ್ಂಡೀಸ್, ಡಾ.ಸಂಗೀತಾ ಎಂ.ಹೀರೇಮಠ, ಕಸ್ತೂರಿ.ಡಿ.ಪತ್ತಾರ್. ಕ್ರೀಡಾ ಕ್ಷೇತ್ರ: ಗಾಯತ್ರಿ, ಅಮೂಲ್ಯಾ.

ಶಿಕ್ಷಣ ಕ್ಷೇತ್ರ: ಲಲಿತಾ ಸಿ.ಕರಿಮನಿ,ವೀರ ಮಹಿಳೆ ಕ್ಷೇತ್ರ: ಡಾ.ವಿಶಾಲಾಕ್ಷಿ. ಕರಡ್ಡಿ,

2024-25ನೆ ಸಾಲಿನಲ್ಲಿ ಸ್ತ್ರೀಶಕ್ತಿ ಯೋಜನೆಯಡಿ ಅತ್ಯುತ್ತಮವಾಗಿ ರಾಜ್ಯಮಟ್ಟದ ಪ್ರಶಸ್ತಿಯನ್ನು ಗದಗದ ಆದಿಶಕ್ತಿ ಮಹಿಳಾ ಸ್ತ್ರೀಶಕ್ತಿ ಸ್ವಸಹಾಯ ಸಂಘ, ಬೆಳಗಾವಿಯ ಐಶ್ವರ್ಯ ಸ್ತ್ರೀಶಕ್ತಿ ಸ್ವಸಹಾಯ ಸಂಘ, ಬೆಂಗಳೂರು ಗ್ರಾಮಾಂತರದ ಶಾರದಾ ಸ್ತ್ರೀಶಕ್ತಿ ಸ್ವಸಹಾಯ ಸಂಘಕ್ಕೆ ಪ್ರದಾನಿಸಲಾಯಿತು.

2024-25ನೆ ಸಾಲಿನಲ್ಲಿ ಯಶೋಧರಮ್ಮ ದಾಸಪ್ಪ ವಿಭಾಗೀಯ ಮಟ್ಟದ ಪ್ರಶಸ್ತಿಯನ್ನು ಪಾರ್ವತಿ ಸ್ತ್ರೀಶಕ್ತಿ ಸ್ವಸಹಾಯ ಸಂಘ-ಚಿತ್ರದುರ್ಗ, ಗೌತಮ ಬುದ್ಧ ಮಹಿಳಾ ಸ್ತ್ರೀಶಕ್ತಿ ಸ್ವಸಹಾಯ ಸಂಘ- ಮೈಸೂರು, ನೀಲಾಂಬಿಕೆ ಸ್ತ್ರೀಶಕ್ತಿ ಸ್ವಸಹಾಯ ಸಂಘ-ಬಾಗಲಕೋಟೆ, ಶಕ್ತಿ ಮಲ್ಲಿಕಾರ್ಜುನ ಮಹಿಳಾ ಸ್ವಸಹಾಯ ಸಂಘಕ್ಕೆ (ಕಲಬುರಗಿ) ನೀಡಲಾಯಿತು.

2024-25ನೇ ಸಾಲಿನಲ್ಲಿ ಅತ್ಯುತ್ತಮ ತಾಲೂಕು ಒಕ್ಕೂಟ ಪ್ರಶಸ್ತಿಯನ್ನು ಸ್ತ್ರೀಶಕ್ತಿ ಮಹಿಳಾ ಬ್ಲಾಕ್ ಸೊಸೈಟಿ-ಬೆಂಗಳೂರು ನಗರ, ಸಹನ ಸ್ತ್ರೀಶಕ್ತಿ ಬ್ಲಾಕ್ ಸೊಸೈಟಿ-ಚಿಕ್ಕಬಳ್ಳಾಪುರ, ಬನಶಂಕರಿ ಸ್ತ್ರೀಶಕ್ತಿ ಬ್ಲಾಕ್ ಸೊಸೈಟಿಗೆ (ಬಾಗಲಕೋಟೆ) ಪ್ರದಾನ ಮಾಡಲಾಯಿತು.



Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News