ವಾರ್ತಾಭಾರತಿ ಪತ್ರಿಕೆಗೆ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಝೀಂ ಅಭಿನಂದನೆ
Update: 2023-12-28 20:34 IST
ಬೆಂಗಳೂರು: ಜನದನಿಯ ಸಾರಥಿ ವಾರ್ತಾಭಾರತಿ ಕನ್ನಡ ದೈನಿಕ ಪತ್ರಿಕೆ 21ನೆ ವರ್ಷಾಚರಣೆ ಆಚರಿಸುತ್ತಿರುವುದರಿಂದ ನಾನು ತುಂಬು ಹೃದಯದಿಂದ ಅಭಿನಂದನೆ ಸಲ್ಲಿಸುತ್ತೇನೆ ಎಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಝೀಂ ತಿಳಿಸಿದ್ದಾರೆ.
ಪ್ರಜಾಪ್ರಭುತ್ವದ ಮೂಲ ಬೇರುಗಳಿಗೆ ಶಕ್ತಿ ನೀಡುವುದರಲ್ಲಿ, ಕೋಮು ಸೌಹಾರ್ದತೆ ಮತ್ತು ಅಲ್ಪಸಂಖ್ಯಾತರ ಶೋಷಣೆಯ ಧ್ವನಿಯಾಗಿ ಕನ್ನಡ ಉಸಿರಾಗಿ ಹಾಗೂ ವಾಕ್ ಸ್ವಾತಂತ್ರ್ಯವು ಸಿದ್ಧಾಂತದೊಂದಿಗೆ ಸದಾಕಾಲ ಇರಲಿ ಎಂಬ ಆಶಯದೊಂದಿಗೆ ಈ ಶುಭ ಸಂದರ್ಭದಲ್ಲಿ ಹಾರೈಸಲು ಇಚ್ಛಿಸುತ್ತೇನೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.